WPL: ಗುಜರಾತ್‌ ಟೈಟಾನ್ಸ್‌ಗೆ ತಲೆಬಾಗಿದ ಸ್ಮೃತಿ ಮಂಧನಾ ಪಡೆ| ತವರಿನಲ್ಲೇ ಮೂರು ಬಾರಿ ನಿರಾಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ನಡೆದ ಗುಜರಾತ್‌ ಟೈಟಾನ್ಸ್‌ v/s ಆರ್‌ಸಿಬಿ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆಗೆ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ವಡೋದರಾದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಆರ್‌ಸಿಬಿ, ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತು ನಿರಾಸೆಗೊಂಡಿದೆ.

ಫಸ್ಟ್ ಗೆ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್ ನಲ್ಲಿ 7 ವಿಕೆಟ್‌ಗೆ 125 ರನ್‌ಗಳ ಮೊತ್ತ ಪೇರಿಸಿತು. ಆದ್ರೆ ಗುಜರಾತ್‌ ಇನ್ನೂ 3.3 ಓವರ್‌ ಬಾಕಿ ಇರುವಾಗಲೇ ಗುರಿ ತಲುಪಿತ್ತು.

ಮೊದಲ 6 ಓವರಲ್ಲಿ ಆರ್‌ಸಿಬಿ 3 ವಿಕೆಟ್‌ಗೆ ಕೇವಲ 25 ರನ್‌ ಗಳಿಸಿತು. ಮುಂದಿನ ಓವರ್ ನಲ್ಲಿ ರಾಘವಿ ಬಿಸ್ತ್‌, ಕನಿಕಾ ಅಹುಜಾ, ಜಾರ್ಜಿಯಾ ವೇರ್‌ಹ್ಯಾಮ್‌, ಕಿಮ್‌ ಗಾರ್ಥ್‌ ತಂಡದ ಮೊತ್ತ 100 ರನ್‌ ದಾಟಲು ನೆರವಾದ್ರು.

ಈ ಗುರಿ ಬೆನ್ನತ್ತಿದ ಗುಜರಾತ್‌ಗೆ ನಾಯಕಿ ಆಶ್ಲೆ ಗಾರ್ಡ್ನರ್‌ರ ಕೇವಲ 31 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 58 ರನ್‌ ಸಿಡಿಸಿ, ಈ ಆವೃತ್ತಿಯಲ್ಲಿ 3ನೇ ಅರ್ಧಶತಕ ದಾಖಲಿಸಿದರು. ಫೋಬ್‌ ಲಿಚ್‌ಫೀಲ್ಡ್‌ ಔಟಾಗದೆ 30 ರನ್‌ ಕೊಡುಗೆ ನೀಡಿದರು. ರೇಣುಕಾ 2-24 ರನ್ ಪೇರಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!