September 29, 2026
Tuesday, September 29, 2026
spot_img

‘ಇದನ್ನು ಬರೆದಿಟ್ಟುಕೊಳ್ಳಿ’..! ಕಾಂಗ್ರೆಸ್ ಭರ್ಜರಿ ಗೆಲುವಿನ ಭವಿಷ್ಯ ನುಡಿದ ಸಿಎಂ ರೇವಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಮ್ಮಂನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ, ಕ್ಷೇತ್ರ ಮರುವಿಂಗಡಣೆ ಬಳಿಕ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 119ರಿಂದ 182ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಈ ಪೈಕಿ ಕಾಂಗ್ರೆಸ್‌ 115ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

18 ಗಂಟೆ ಕೆಲಸ ಮಾಡುವ ಸಂಕಲ್ಪ

ಭದ್ರಾಚಲದ ಶ್ರೀರಾಮ ಹಾಗೂ ಸೀತಾದೇವಿಯ ಹೆಸರಿನಲ್ಲಿ ಪ್ರಮಾಣ ಮಾಡಿ ಮಾತನಾಡಿದ ಸಿಎಂ, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಜನರ ವಿಶ್ವಾಸ ಗಳಿಸಲು ಕಾಂಗ್ರೆಸ್‌ ನಾಯಕರು ದಿನಕ್ಕೆ 18 ಗಂಟೆಗಳ ಕಾಲ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:

ಬಿಆರ್‌ಎಸ್‌ಗೆ ತಿರುಗೇಟು

ಬಿಆರ್‌ಎಸ್‌ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಹಾಗೂ ಪಕ್ಷದ ನಾಯಕರನ್ನು ಉಲ್ಲೇಖಿಸಿದ ರೇವಂತ್ ರೆಡ್ಡಿ, ” ಜುಲೈ 10, 2026 ಈ ದಿನಾಂಕವನ್ನು ನೆನಪಿಟ್ಟುಕೊಳ್ಳಿ. ಇದೇ ಕಾಂಗ್ರೆಸ್‌ನ ಎರಡನೇ ಅವಧಿಯ ಅಭಿಯಾನದ ಆರಂಭ” ಎಂದು ಹೇಳಿದರು.

ಸಮೀಕ್ಷೆಗಳಲ್ಲೇ ರಾಜಕೀಯ ಜಂಗಿ

ಇನ್ನೊಂದೆಡೆ, ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮಾರಾವ್, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಈಗ ಚುನಾವಣೆ ನಡೆದರೆ ಬಿಆರ್‌ಎಸ್‌ ಸುಮಾರು 78 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಹೇಳಿದ್ದು, ಎರಡೂ ಪಕ್ಷಗಳ ನಡುವಿನ ರಾಜಕೀಯ ವಾಕ್ಸಮರ ಈಗಲೇ ತೀವ್ರಗೊಂಡಿದೆ.

Must Read