ಹೊಸದಿಗಂತ ವರದಿ, ಸೋಮವಾರಪೇಟೆ:
ಸ್ವರ್ಣ ಭಾರತಿ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ 2025 ರ “ಮಹಿಳಾರತ್ನ ಅವಾರ್ಡ್” ನ್ನು ಲೇಖಕಿ ಗೀತಾಂಜಲಿ ಮಹೇಶ ಅವರಿಗೆ ಪ್ರದಾನ ಮಾಡಲಾಗಿದೆ.
ಪ್ರತಿವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ “ಮಹಿಳಾ ರತ್ನ” ಅವಾರ್ಡ್ ನ್ನು ನೀಡಿ ಗೌರವಿಸಲಾಗುತ್ತಿದೆ.
ಈ ಸಮಾರಂಭದಲ್ಲಿ ಗೌರವಾನ್ವಿತ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಬೆಂಗಳೂರಿನ ಅಸಿಸ್ಟೆಂಟ್ ಕಮಿಷನರ್ ರಂಗಪ್ಪ, ಟಿರ್ವ9 ನಿರೂಪಕಿ ಸುಕನ್ಯಾ ಹಾಗೂ ಸ್ವರ್ಣ ಭಾರತ್ ಫೌಂಡೇಶನ್ ನ ಅಧ್ಯಕ್ಷ ಡಾಕ್ಟರ್ ರಜನಿಶ್ ಸಂತೋಷ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
ಯುವ ಲೇಖಕಿ ಗೀತಾಂಜಲಿ ಮಹೇಶ ಅವರು ತಮ್ಮ ಕವನ, ಬರಹಗಳ ಮೂಲಕ ಗುರುತಿಸಿಕೊಂಡಿದ್ದು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವು ಪ್ರಕಟವಾಗಿವೆ.