ಹೊಸದಿಗಂತ ವರದಿ, ಯಾದಗಿರಿ:
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಮಂಜೂಳಾ ಗೂಳಿ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಲಾಗಿದೆ.
ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷೆಯನ್ನು ಪಕ್ಷ ನೇಮಕಗೊಳಿಅಇದ ಕಾರಣ ಆಕ್ರೋಶಗೊಂಡ ಆಕೆಯ ಪತಿ ಶಂಕರ್ ಗೂಳಿ ಮತ್ತು ಬಾಬುಗೌಡ ಆಗತೀರ್ಥ ಎಂಬುವವರು ಶುಕ್ರವಾರ ರಾತ್ರಿ ಕಚೇರಿಗೆ ಬೆಂಕಿ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರಡ್ಡಿ ಮಂಜೂಳಾ ಗೂಳಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟನೆಗೊಳಿಸಿ ಆದೇಶಿಸಿದ್ದಾರೆ.