Monday, December 8, 2025

ಯಾದಗಿರಿ | ವೈದ್ಯರ ನಿರ್ಲಕ್ಷ್ಯ…ಹೆರಿಗೆ ವೇಳೆ ಹಸುಗೂಸು ಸಾವು

ಹೊಸದಿಗಂತ ವರದಿ, ಯಾದಗಿರಿ:

ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಹೆರಿಗೆ ವೇಳೆ ಹಸುಗೂಸು ಮೃತಪಟ್ಟಿದೆ ಎಂದು ಆರೋಪಿಸಿದ ಪೋಷಕರು ಇಲ್ಲಿನ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂದೆ ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ತಾಲೂಕಿನ ಬಳಿಚಕ್ರ ಶಾಂಡಾದ ನಿವಾಸಿ ನೀಲಾಬಾಯಿ ಹೆಂಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಕಾಲಕ್ಕೆ ವೈದ್ಯರು ಹರಿಗೆ ಮಾಡಿಸದ ಕಾರಣ ಮಗುವಿನ ಸಾವಾಗಿದ್ದು, ಇದಕ್ಕೆ ನೇರವಾಗಿ ವೈದ್ಯರು ಮತ್ತು ಸಿಬ್ಬಂದಿಯೇ ಕಾರಣವೆಂದು ಆರೋಪಿಸಿದ ಪೂಷಕರು ಆಸ್ಪತ್ರೆ ಮುಂದೇ 2- 3 ತಾಸು ಪ್ರತಿಭಟನೆ ನಡೆಸಿದರು.

ಘಟನೆ ವಿವರ : ತಾಲೂಕಿನ ಬಳಚಕ್ರ ಕಾಂಡಾದ ನಿವಾಸಿ ನೀಲಾಬಾಯಿ ಶನಿವಾರ ಬೆಳಗ್ಗೆ ಹೆಂಗ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮಹಿಳೆಯನ್ನು ಕೇರ್ ಮಾಡಿರಲಿಲ್ಲ. ಮಹಿಳೆ ತೀವ್ರ ಹರಿಗೆ ನೋವಿನಿಂದ ಬಳಲುತ್ತಿದ್ದರೂ ಅನ್ನಕ್ಕೆ ಸಿಬ್ಬಂದಿ ಬೆಡ್ ನೀಡಿರಲಿಲ್ಲ. ಹೀಗಾಗಿ ನಿನ್ನೆ ಇರ್ಡಿ ದಿನ ಆಸ್ಪತ್ರೆಯ ನೆಲದ ಮೇಲೆ ಗರ್ಭಿಣಿ ಮಲಗಿದ್ದಳು ಆದರೆ ರಾತ್ರಿಯಿಡೀ ತೀವ್ರ ಹೆರಿಗೆ ನೋವಿನಿಂದ ಬಳಲಿದ ನೀಲಾಬಾಯಿಗೆ ಸಹಜ ಹರಿಗೆಯಾಗುತ್ತದೆ ಎಂದು ಹೇಳಿದ ವೈದ್ಯರು ಬೆಳಗಿನ ಜಾವ ಗಂಟೆ ಹೊತ್ತಿಗೆ ಸಿಜೇರಿಯನ್ ಮಾಡಿ, ಹಂಗೆಗೆ ಮುಂದಾದಾಗ ಮಗು ಮೃತಪಟ್ಟಿದೆ ಎಂಬುವುದು ನೀರಾಬಾಯಿ ಕುಟುಂಬದ ಆರೋಪ.

ಹೀಗಾಗಿ ತಪ್ಪು ಮಾಡಿ‌ ಮಗುವಿನ ಸಾವಿಗೆ ಕಾರಣರಾದ ವೈದ್ಯರ ಮೇಲೆ ಕಾನೂನಿನ‌ ಕ್ರಮ‌ ಜರುಗಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.

error: Content is protected !!