ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ದಸರಾ ಹಬ್ಬದ ಆಯುಧ ಪೂಜೆ ಆಚರಣೆ ಸಡಗರದಿಂದ ಕೂಡಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿಂದು ಸಾಂಪ್ರದಾಯಿಕವಾಗಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ.
ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸುಮಾರು 1 ಗಂಟೆ ಕಾಲ ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆ ಸಲ್ಲಿಸಿದರು.
ಈ ವೇಳೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಫಿರಂಗಿಗಳು, ರಾಜಮನೆತನದವರು ಬಳಸುತ್ತಿದ್ದ ವಾಹನಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜಾ ವಿಧಿವಿಧಾನ ಮುಗಿಸಿದರು.
ಈ ಪೂಜಾ ಕೈಂಕರ್ಯವನ್ನು ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಹಾಗೂ ತಾಯಿ ಪ್ರಮೋದಾ ದೇವಿ ಒಡೆಯರ್ ಮತ್ತು ಪುತ್ರ ಆದ್ಯವೀರ್ ಒಡೆಯರ್ ಕಣ್ತುಂಬಿಕೊಂಡರು.