ಯಕ್ಷಗಾನ ಯುವ ಕಲಾವಿದ ಗುರುಪ್ರಸಾದ್ ಆತ್ಮಹತ್ಯೆ

ಹೊಸದಿಗಂತ ವರದಿ,ಮಂಗಳೂರು:

ಬಡಗುತಿಟ್ಟು ಯಕ್ಷಗಾನ ಯುವ ಕಲಾವಿದ ಗುರುಪ್ರಸಾದ್ ಕುಲಾಲ್ (25) ನೇಣಿಗೆ ಶರಣಾಗಿದ್ದಾರೆ

ಕಲಾವಿದ ಗುರುಪ್ರಸಾದ್ ಉಡುಪಿಯ ಬ್ರಹ್ಮಾವರ ತಾಲೂಕು ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು.

ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಹೀಗೆ ಹಲವು ಮೇಳಗಳಲ್ಲಿ ಸೇವೆ ನೀಡಿದ್ದರು. ಬಹುತೇಕ ಸ್ತ್ರೀ ಪಾತ್ರಗಳ ಮೂಲಕವೇ ಗುರುಪ್ರಸಾದ್ ಪ್ರಚಾರದಲ್ಲಿದ್ದರು. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!