ಯಪ್ಪೋ ಭಯಂಕರ ಸೆಖೆ: ಕೇರಳದ ಸ್ವಿಫ್ಟ್ ಬಸ್‌ಗಳ ಗಾಜಿನ ಕಿಟಕಿಗಳಿಗೆ ಶೀಘ್ರವೇ ಗೇಟ್‌ಪಾಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ದಿನದಿಂದ ದಿನಕ್ಕೆ ವಾತಾವರಣದ ಉಷ್ಣಾಂಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಸ್ವಿಫ್ಟ್ ಬಸ್‌ಗಳ ಕಿಟಕಿಗಳಿಗೆ ಅಳವಡಿಸಿರುವ ಗಾಜುಗಳನ್ನು ತೆಗೆಯಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.

ಇಲ್ಲಿ ಕೆಲವು ಸೂಪರ್ ಫಾಸ್ಟ್ ಬಸ್‌ಗಳಲ್ಲಿ ಶೆಟರ್‌ಗಳ ಬದಲಿಗೆ ಗಾಜಿನ ಕಿಟಕಿಗಳಿವೆ. ಇವು ಬಸ್ ಒಳಗೆ ಗಾಳಿ ಸರಿಯಾಗಿ ಬರಲು ಅಡ್ಡಿಯಾಗುತ್ತಿದೆ. ಅಲ್ಲದೆ ಕೆಲವು ಗಾಜುಗಳು ಅಲುಗಾಡಿಸಲೂ ಸಾಧ್ಯವಾಗದಂತೆ ಕೆಟ್ಟುಹೋಗಿ ಪರಿಸ್ಥಿತಿಯನ್ನು ಬಿಗಡಾಯಿಸುತ್ತಿವೆ. ಇದನ್ನು ಗಮನಿಸಿರುವ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸಲು ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!