ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವಿಟರ್‌ನಲ್ಲಿ ಸೆಲೆಬ್ರಿಟಿಗಳನ್ನು ಈಸಿಯಾಗಿ ಗುರುತಿಸೋಕೆ ಸಹಾಯ ಮಾಡೋದು ಬ್ಲ್ಯೂಟಿಕ್. ಆದರೆ ಇದೀಗ ಸೆಲೆಬ್ಸ್ ಹಾಗೂ ರಾಜಕಾರಣಿಗಳ ರಿಯಲ್ ಅಕೌಂಟ್ ಯಾವುದು? ಫೇಕ್ ಅಕೌಂಟ್ ಯಾವುದು ಎಂದು ತಿಳಿಯದಂತೆ ಆಗಿದೆ!
ಇದಕ್ಕೆ ಕಾರಣ ಟ್ವಿಟರ್‌ನ ಬ್ಲ್ಯೂಟಿಕ್ ಮಾಯವಾಗಿರೋದು! ಹಣ ಪಾವತಿಸದ ಕಾರಣ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಬ್ಲ್ಯೂ ಟಿಕ್ ಮಾಯವಾಗಿದೆ, ಮತ್ತೆ ಬ್ಲ್ಯೂ ಟಿಕ್ ಬೇಕು ಎಂದರೆ ಹಣ ಪಾವತಿ ಮಾಡಲೇಬೇಕಿದೆ.
ಯಶ್, ಅಲ್ಲು ಅರ್ಜುನ್, ಅಮಿತಾಭ್ ಬಚ್ಚನ್, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಹೀಗೆ ಸಾಕಷ್ಟು ಮಂದಿಯ ಬ್ಲ್ಯೂಟಿಕ್ ಮಾಯವಾಗಿದ್ದು, ಸಾಮಾನ್ಯರ ಖಾತೆಯಂತೆ ಕಾಣುತ್ತಿದೆ.
ಎಲಾನ್ ಮಸ್ಕ್ ಟ್ವಿಟರ್ ಸಿಇಒ ಆದ ನಂತರ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಬ್ಲ್ಯೂ ಟಿಕ್‌ಗಾಗಿ ಹಣ ಪಾವತಿ ಮಾಡಬೇಕು ಎನ್ನುವುದು ಮೊದಲ ನಿಯಮವಾಗಿದೆ. ಈ ಹಿಂದೆ ಸೆಲೆಬ್ರಿಟಿ ಎಂದು ಗುರುತಿಸಿದ ತಕ್ಷಣ ಅವರಿಗೆ ಬ್ಲೂಟಿಕ್ ಸಿಗುತ್ತಿತ್ತು. ಆದರೆ ಈಗ ಯಾರು ಬೇಕಾದರೂ ಬ್ಲ್ಯೂಟಿಕ್ ಪಡೆಯಬಹುದಾಗಿದೆ.