October 9, 2026
Friday, October 9, 2026
spot_img

ರಣ್‌ಬೀರ್‌ ಕಪೂರ್‌ಗಿಂತ ಹೆಚ್ಚಾಗಿದೆ ಯಶ್‌ ಕ್ರೇಝ್‌! ರಾಕಿಂಗ್‌ ಸ್ಟಾರ್‌ ಹವಾ ನೋಡಿ ದಂಗಾದ ಬಾಲಿವುಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈವೆಂಟ್‌ ಅಥವಾ ಕಾರ್ಯಕ್ರಮ ಯಾವುದೇ ಇರಲಿ ತಮ್ಮ ನೆಚ್ಚಿನ ನಟನನ್ನು ಮೊದಲ ಬಾರಿಗೆ ನೋಡಿದಾಗ ಅಥವಾ ಮಾತನಾಡಲು ಶುರು ಮಾಡಿದಾಗ ಜೋರಾಗಿ ಕೂಗಿ ಜೋಶ್‌ ಹೆಚ್ಚಿಸೋದು ಜನರ ಅಭ್ಯಾಸ!

ಈ ಬಾರಿ ದೆಹಲಿಯಲ್ಲಿ ನಡೆದ ರಾಮಾಯಣ ಸಿನಿಮಾದ ಈವೆಂಟ್‌ನಲ್ಲಿ ಯಶ್‌ ಹವಾ ಎದ್ದುಕಾಣಿಸಿದೆ. ರಾಮನ ಪಾತ್ರಧಾರಿ ರಣಬೀರ್ ಕಪೂರ್, ಸೀತಾ ಪಾತ್ರಧಾರಿ ಸಾಯಿ ಪಲ್ಲವಿ ಸೇರಿದಂತೆ ತಂಡದ ಅನೇಕರು ವೇದಿಕೆ ಏರಿದರು. ಆಗ ಯಾರೊಬ್ಬರೂ ಸಿಳ್ಳೆ ಹಾಕಲಿಲ್ಲ, ದೊಡ್ಡದಾಗಿ ಕಿರುಚಾಡಲಿಲ್ಲ. ನೆರೆದಿದ್ದ ಜನಸಮೂಹ ಸೈಲೆಂಟ್ ಆಗಿತ್ತು. ಯಾವಾಗ ಯಶ್ ಅವರು ವೇದಿಕೆ ಏರಿದರೋ ಆಗ ಜೋರಾದ ಚಪ್ಪಾಳೆ ಕೇಳಿಸಿತು. ನೆರೆದಿದ್ದವರು ಜೋರಾಗಿ ಕೂಗಿದರು. ಅವರು ಮಾತನಾಡುವಾಗಲೂ ಇದೇ ಪರಿಸ್ಥಿತಿ ಮರುಕಳಿಸಿತು. ಇದು ಯಶ್ ಅವರ ಜನಪ್ರಿಯತೆಯನ್ನು ತೋರಿಸಿದೆ. ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇಡೀ ಬಾಲಿವುಡ್‌ ಯಶ್‌ನ ಕ್ರೇಝ್‌ ನೋಡಿ ಶಾಕ್‌ ಆಗಿದ್ದಾರೆ. ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು ಮಾತ್ರ ತಮ್ಮ ಚಾಯ್ಸ್‌ ಸರಿಯಾಗಿದೆ ಎಂದು ಖುಷಿಪಟ್ಟಿದ್ದಾರೆ.

Must Read