ಡೆಲ್ಲಿ ಕ್ಯಾಪಿಟಲ್ಸ್​ ಪಾಲಾದ ಭಾರತದ ಅಂಡರ್​-19 ತಂಡದ ನಾಯಕ ಯಶ್​ ಧುಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಅಂಡರ್​-19 ವಿಶ್ವಕಪ್​ ತಂಡದ ನಾಯಕ ಯಶ್​ ಧುಲ್​ರನ್ನು ಐಪಿಎಲ್ ಹರಾಜಿನಲ್ಲಿ 50 ಲಕ್ಷ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿದೆ.
ಯುವ ಕ್ರಿಕೆಟಿಗರನ್ನು ಬೆಳೆಸುವ ಡೆಲ್ಲಿ ತಂಡದ ಪ್ರಯತ್ನ ಮುಂದುವರೆದಿದ್ದು, 2022ರ ವಿಶ್ವಕಪ್ ವಿಜೇತ ತಂಡದ ಸ್ಟಾರ್​ ಯಶ್​ ಧುಲ್​ರನ್ನು ಖರೀದಿಸಿದೆ.
ಯಶ್​ ಧುಲ್ ಅಂಡರ್ 19 ವಿಶ್ವಕಪ್​ನಲ್ಲಿ 4 ಪಂದ್ಯಗಳಿಂದ 229 ರನ್ ​ಗಳಿಸಿದ್ದರು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 82 ರನ್​ಗಳಿಸಿ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದರು.ಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್​ನಲ್ಲಿ 110 ರನ್ ​ಗಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!