ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯಶ್, ರಾಧಿಕಾ ಪಂಡಿತ್ ಹಾಗೂ ಕುಟುಂಬದವರು ಬೆಳ್ತಂಗಡಿಯ ಇತಿಹಾಸ ಪ್ರಸಿದ್ಧ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಆಗಮಿಸಿ, ದೇವರ ದರುಶನ ಪಡೆದಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರೊ. ಸತೀಶ್ಚಂದ್ರ ಅವರು ಯಶ್ ಹಾಗೂ ರಾಧಿಕಾಗೆ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ.
ಹೊಸ ಚಿತ್ರ ಬಿಡುಗಡೆ ಅಥವಾ ಶೂಟಿಂಗ್ ಆರಂಭಕ್ಕೂ ಮುನ್ನ ಯಶ್ ಪ್ರತಿ ಬಾರಿಯೂ ಸುರ್ಯ ದೇವಸ್ಥಾನಕ್ಕೆ ಬಂದು ಹರಕೆ ಒಪ್ಪಿಸುತ್ತಾರೆ. ಯಶ್ ಫ್ಯಾಮಿಲಿ ಜತೆ ಟಾಕ್ಸಿಕ್ ಚಲಚಿತ್ರದ ನಿರ್ದೇಶಕ ವೆಂಕಟ್ ಮತ್ತು ತಂಡದವರು ದೇವರ ದರುಶನ ಪಡೆದು ಬಳಿಕ ಮಣ್ಣಿನ ಹರಕೆಯನ್ನು ದೇವರಿಗೆ ಅರ್ಪಿಸಿದ್ದಾರೆ.