ಸೌತ್ ಸಿನಿಮಾಗಳನ್ನು ಗೇಲಿ ಮಾಡುತ್ತಿದ್ದ ಜನ: ಬಾಹುಬಲಿ ನಂತರ ಎಲ್ಲವೂ ಬದಲಾಯಿತು- ಯಶ್ ಸೆನ್ಸೇಷನಲ್ ಕಮೆಂಟ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಕಿಂಗ್‌ ಸ್ಟಾರ್‌ ಯಶ್ ಖದರ್ರೇ ಬೇರೆಯಾಗಿದೆ. ಕೆಜಿಎಫ್, ಕೆಜಿಎಫ್ 2 ನಂತರ ಪ್ಯಾನ್ ಇಂಡಿಯಾ ನಾಯಕನಾಗಿ ಭಾಷಾ ಗಡಿ ಮೀರಿ ಗುರುತಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಎಲ್ಲರ ಕಣ್ಣು ಇದೀಗ ಕನ್ನಡ ಚಿತ್ರರಂಗದ ಮೇಲೆ ಬಿದ್ದಿದೆ. ಆ ಸಾಲಿಗೆ ಈಗ ಕಾಂತಾರ ಕೂಡಾ ಸೇರಿದ್ದು, ಕನ್ನಡ ಸಿನಿಮಾಗಳಿಗೆ ಬೇಡಿಕೆ ಕೂಡ ಹೆಚ್ಚಿದೆ. ಈ ಸಮಯದಲ್ಲಿ ಬಾಹುಬಲಿ ಬಂದ ಬಳಿಕ ಸೌತ್‌ ಸಿನಿಮಾಗಳನ್ನು ನೋಡುವ ರೀತಿ ಬದಲಾಗಿದೆ ಎಂದರು.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಯಶ್ ಸೌತ್ ಮತ್ತು ಬಾಲಿವುಡ್ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಬಾಲಿವುಡ್‌ ಮಂದಿ ಸೌತ್ ಸಿನಿಮಾಗಳನ್ನು ಹೇಗೆ ನೋಡುತ್ತಿದ್ದರು ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಹತ್ತು ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಾಲಿವುಡ್ ಮಂದಿ ಸೌತ್ ಸಿನಿಮಾಗಳನ್ನು ಗೇಲಿ ಮಾಡುತ್ತಿದ್ದರು. ಇಲ್ಲಿನ ಸಾಹಸ ದೃಶ್ಯಗಳು ಅಥವಾ ಫೈಟಿಂಗ್‌ ದೃಶ್ಯಗಳನ್ನು ನೋಡಿ ಇದೇನು ಹೀಗೆ ಹಾರಿ ಹೋಗಿ ಬೀಳುತ್ತಿದ್ದಾರೆ ಎಂದು ಕಾಮೆಂಟ್ ಮಾಡುವುದಲ್ಲಿದೆ, ನಮ್ಮ ಚಿತ್ರಗಳನ್ನು ನೋಡಿ ನಕ್ಕರು. ಆದರೆ ಅಂತಿಮವಾಗಿ ಇದೀಗ ದಕ್ಷಿಣ ಸಿನಿಮಾದ ಕಲೆ ಅಂದರೆ ಏನು ಎಂಬುದನ್ನು ಬಾಲಿವುಡ್‌ ಮಂದಿ ತಡವಾಗಿ ಅರ್ಥಮಾಡಿಕೊಂಡರು.

ಒಂದಾನೊಂದು ಕಾಲದಲ್ಲಿ ಸೌತ್ ಸಿನಿಮಾಗಳನ್ನು ಬಾಲಿವುಡ್ ನಲ್ಲಿ ಅತಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು, ಆದರೆ ಈಗ ಹೇಗಿದೆ? ಏನನ್ನು ಕೊಳ್ಳಬೇಕೆಂದು ನಿಮಗೂ ಗೊತ್ತು. ಇದು ರಾಜಮೌಳಿ ಅವರ ಬಾಹುಬಲಿ ಚಿತ್ರದಿಂದ ಪ್ರಾರಂಭವಾಯಿತು. ಬಾಹುಬಲಿ ನಂತರ ಎಲ್ಲರೂ ಸೌತ್ ಸಿನಿಮಾ ಎಂದು ಗುರುತಿಸಿದ್ದಾರೆ ಎಂದರು. ಯಶ್ ಅವರ ಈ ಕಾಮೆಂಟ್ ಈಗ ಬಾಲಿವುಡ್ ನಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!