ಹೊಸದಿಗಂತ ಡಿಜಿಟಲ್ ಡೆಸ್ಕ್:
ಯತೀಂದ್ರ-ಸಿದ್ದರಾಮಯ್ಯ ನಡುವಿನ ಸಂಭಾಷಣೆಯ ವಿಡಿಯೋ ಬಗ್ಗೆ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ಕುರಿತು ಸರಕಾರದ ವಿರುದ್ಧ ಟೀಕೆಗಳು ಸುರಿಮಳೆ ಹರಿಸುತ್ತಿರುವ ಕುಮಾರಸ್ವಾಮಿ ಆರೋಪದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಯತೀಂದ್ರ ಈ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ ಎಂದರು.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಯತೀಂದ್ರ, ಆ ವಿಡಿಯೋದಲ್ಲಿ ನಾನು ಲಿಸ್ಟ್ ಬಗ್ಗೆ ಮಾತ್ರ ಮಾತನಾಡಿದ್ದೇನೆ, ಯಾವ ಲಿಸ್ಟ್ ಅನ್ನೋದು ಗೊತ್ತಿಲ್ಲ. ಅದು ವರ್ಗಾವಣೆಯ ಲಿಸ್ಟಾ? ಅದರಲ್ಲಿ ದಂಧೆ ನಡೆದಿದ್ಯಾ ಅನ್ನೋದರ ಬಗ್ಗೆಯೂ ಕ್ಲಾರಿಟಿ ಇಲ್ಲ. ಹೀಗಿರುವಾಗ ಸುಖಾಸುಮ್ಮನೆ ವರ್ಗಾವಣೆ ದಂಧೆ ಎಂದು ಸುಳ್ಳು ಆರೋಪ ಹೇಗೆ ಮಾಡ್ತಾರೆ? ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿಯವರಿಗೆ ಬೇಕಾದಷ್ಟು ಹೆಸರುಗಳನ್ನು ಕೊಟ್ಟಿದಿನಿ. ಕ್ಷೇತ್ರದ ಕಾಮಗಾರಿ, ನಿಗಮ ಮಂಡಳಿಗಳ ಅಧ್ಯಕ್ಷರ ಹೆಸರು, ಸರಕಾರದ ಬೇರೆ ಬೇರೆ ಕಮಿಟಿಗಳಿವೆ ಅದರ ಸದಸ್ಯರಾಗಲು ನಮ್ಮ ಕಾರ್ಯಕರ್ತರು ಮನವಿ ಮಾಡಿದಾರೆ. ಇವರ ಹೆಸರುಗಳನ್ನು ಕೊಟ್ಟಿದ್ದೇನೆ. ಸಿಎಸ್‌ಆರ್ ಲಿಸ್ಟ್ ಕೊಟ್ಟಿದ್ದೇನೆ. ಹೀಗೆ ಹತ್ತಾರು ಲಿಸ್ಟ್ಗಳನ್ನು ಕೊಟ್ಟಿರುವಾಗ ಅದು ವರ್ಗಾವಣೆಯದ್ದೇ ಎಂದು ಹೇಗೆ ಹೇಳ್ತಾರೆ? ಇದರ ಬಗ್ಗೆ ಯಾರಿಗೂ ನಾನು ಸ್ಪಷ್ಟನೆ ಕೊಡುವ ಅಗತ್ಯನೇ ಇಲ್ಲ, ಏಕೆಂದರೆ ಅದರಲ್ಲಿ ಹಣದ ಬಗ್ಗೆ ಪ್ರಸ್ತಾಪ ಆಗಿದ್ಯಾ ಎಂದರು.