ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದ್ದು, ಈ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅದು ಅವರ ಪಾರ್ಟಿ ವಿಚಾರ. ಆ ಮುತ್ತುರತ್ನಗಳನ್ನ ಪಾರ್ಟಿಯಲ್ಲಾದ್ರೂ ಇಟ್ಟುಕೊಳ್ಳಲಿ ಹೊರಗೆ ಬೇಕಾದ್ರೂ ಬಿಸಾಕಲಿ ನನಗ್ಯಾಕೆ ಎಂದರು.
ಕೆಲವರು ಶೋಭೆಗೆ ಒಂದೊಂದು ಆಭರಣ ಇಟ್ಟುಕೊಳ್ತಾರೆ. ಕೆಲವರು ಕಿವಿಯೋಲೆ ಹಾಕಿಕೊಳ್ತಾರೆ, ಕೆಲವರು ಹಣೆಗೆ ಇಟ್ಟುಕೊಳ್ತಾರೆ, ಕೆಲವರಿಗೆ ಕಾಲಿಗೆ ಗೆಜ್ಜೆ ಬೇಕು.. ಅವರಿಗೆ ಏನೇನು ಬೇಕೋ ಹಾಗೆ ಮಾಡಿದ್ದಾರೆ ಅಷ್ಟೇ. ಅವರ ಪಾರ್ಟಿಯಲ್ಲಿ ಏನಾದ್ರೂ ಮಾಡಿಕೊಳ್ಳಲಿ ನನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದರು.