ವರ್ಷದ ಹಿಂದೆ ಸತ್ತ ವ್ಯಕ್ತಿ ಹೆಸರಿನಲ್ಲಿ ಪಾವತಿಯಾಗ್ತಿತ್ತು ಡಯಾಲಿಸಿಸ್​ ಮಾಡಿದ ಬಿಲ್​!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಒಂದು ವರ್ಷದ ಹಿಂದೆಯೇ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಈಗಲೂ ಡಯಾಲಿಸಿಸ್​ ಮಾಡಿದ ಬಿಲ್​ ಪಾವತಿಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಈ ವಂಚನೆಯ ಘಟನೆ ನಡೆದಿದೆ. ಈ ಬಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ವಂಚನೆ ಪ್ರಕರಣ ಬಯಲಾಗಿದೆ.
ಘಟನೆಯೇನು? : ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಬಹದ್ದೂರ್ ಬಿಸ್ವಕರ್ಮ ಎಂಬುವರು ಮೂತ್ರಪಿಂಡ ಕಾಯಿಲೆಗೆ ಒಳಗಾಗಿ ಡಯಾಲಿಸಿಸ್​ ಚಿಕಿತ್ಸೆ ಪಡೆಯುತ್ತಿದ್ದರು. 1 ವರ್ಷದ ಹಿಂದೆಯೇ ಕಾಯಿಲೆ ಗುಣಮುಖವಾಗದೇ 2021ರ ಜೂನ್​ 23ರಂದು ಸಾವನ್ನಪ್ಪಿದ್ದರು. ರೋಗಿ ಮೃತಪಟ್ಟು ವರ್ಷವಾದರೂ ಆತನ ಹೆಸರಿನಲ್ಲೇ ಆಸ್ಪತ್ರೆಯವರು ಮಾತ್ರ ಡಯಾಲಿಸಿಸ್​ ಮಾಡುತ್ತಿರುವ ನಕಲಿ ಬಿಲ್​ಗಳನ್ನು ಸೃಷ್ಟಿಸಿ ಹಣ ಪಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಮಾಧ್ಯಮವೊಂದು ಸುದ್ದಿ ಪ್ರಸಾರ ಮಾಡಿತ್ತು.
ಇನ್ನು ಸುದ್ದಿ ಪ್ರಸಾರವಾದ ಬಳಿಕ ತನಿಖೆಗೆ ಮುಂದಾದ ಆರೋಗ್ಯ ಇಲಾಖೆ ಅಧಿಕಾರಿ ಚಂದನ್​ ಘೋಷ್​ ಎಂಬುವರು ರೋಗಿಯ ರೂಪದಲ್ಲಿ ಚಿಕಿತ್ಸೆಗಾಗಿ ತೆರಳಿ ಈ ವಂಚನೆ ಪತ್ತೆ ಹಚ್ಚಿದ್ದಾರೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!