ಹೊಸದಿಗಂತ ಡಿಜಿಟಲ್ ಡೆಸ್ಕ್ :
ಟ್ರಾಫಿಕ್ ಕಿರಿಕಿರಿ ಎದುರಿಸುವ ಬೆಂಗಳೂರಿಗರಿಗೆ ಸಿಹಿಸುದ್ದಿ ಇಲ್ಲಿದೆ. ಜುಲೈ ವೇಳೆಗೆ ಮತ್ತೊಂದು ಮೆಟ್ರೋ ಮಾರ್ಗವನ್ನ ತೆರೆಯುವ ಸಾಧ್ಯತೆಯಿದೆ. ಇದರಿಂದ ನಗರದ ಹಲವಾರು ಪ್ರಮುಖ ಪ್ರದೇಶಗಳಲ್ಲಿನ ವಾಹನ ದಟ್ಟಣೆ ಮತ್ತಷ್ಟು ಕಡಿಮೆಯಾಗಲಿದೆ.
ಬೊಮ್ಮಸಂದ್ರದಿಂದ ಹೆಚ್ಚು ದಟ್ಟಣೆಯಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ನಮ್ಮ ಮೆಟ್ರೋದ ‘ಹಳದಿ ಮಾರ್ಗ’ ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ತೆರೆಯುವ ನಿರೀಕ್ಷೆಯಿದೆ.