ಮಾನವ ದೇಹದ ಕಣಕಣದಲ್ಲೂ ಮೈಕ್ರೋಪ್ಲಾಸ್ಟಿಕ್‌! ಸಂಶೋಧನೆಗಳಲ್ಲಿ ಬಯಲಾಗುತ್ತಿದೆ ಅಪಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭೂಮಿ ಪ್ಲಾಸ್ಟಿಕ್‌ ಮಯವಾಗಿದೆ. ಭೂಮಿಯೊಳಗೆ ಕೋಟ್ಯಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಹೋಗಿದೆ. ಪರ್ವತಗಳ ಶಿಖರಗಳಿಂದ ಸಮುದ್ರದ ತಳದವರೆಗೂ ಪ್ಲಾಸ್ಟಿಕ್ ಸರ್ವವ್ಯಾಪಿಯಾಗಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಸೇವಿಸುವ ಗಾಳಿಯಲ್ಲೂ ಪ್ಲಾಸ್ಟಿಕ್ ಬೆರೆತಿದೆ. ಇನ್ನೊಂದು ವಿಚಾರ ಗೊತ್ತಾ.. ನಮ್ಮ ದೇಹದೊಳಗೂ ಪ್ಲಾಸ್ಟಿಕ್‌ ಸೇರಿಹೋಗಿದೆ.
ಹೌದು..! ಮಾನವನ ದೇಹದೊಳಗೆ ಪ್ಲಾಸ್ಟಿಕ್ ಕಣಗಳ ಇರುವಿಕೆ ಸಂಶೋಧನೆಗಳಿಂದ ದೃಢಪಟ್ಟದೆ. ಪ್ರಪಂಚದ್ಯಂತ ಜನರು ಪ್ರತಿನಿತ್ಯ ಮೈಕ್ರೋ ಪ್ಲಾಸ್ಟಿಕ್‌ ತುಣುಕುಗಳನ್ನು ಸೇವಿಸುತ್ತಿದ್ದಾರೆ ಎಂದು ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ. ಈಗ, ಮೈಕ್ರೋಪ್ಲಾಸ್ಟಿಕ್‌ಗಳ ವ್ಯಾಪಕ ಸೇವನೆಯಿಂದ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಏನೆಲ್ಲಾ ಪರಿಣಾಮಗಳುಂಟಾಗುತ್ತವೆ ಎಂಬುದನ್ನು ಅರೈಸಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.
ಜನರು ತಮ್ಮ ಅರಿವಿಗೇ ಬಾರದಂತೆ ವಾರವೊಂದರಲ್ಲಿ ಸರಾಸರಿ 5 ಗ್ರಾಂಗಳಷ್ಟು ಮೈಕ್ರೋಪ್ಲಾಸ್ಟಿಕ್‌ಗಳನ್ನು ಸೇವಿಸುತ್ತಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅನೇಕ ಗಂಭೀರ ಕಾಯಿಲೆಗಳಿಗೆ ಪ್ಲಾಸ್ಟಿಕ್‌ ಸೇವನೆಯೇ ಪ್ರಮುಖ ಕಾರಣವಾಗಿದೆ ಎನ್ನುತ್ತಿವೆ ಸಂಶೋಧನೆಯ ಮೂಲಗಳು. ದೇಹಸೇರುವ ಪ್ಲಾಸ್ಟಿಕ್ ತುಣುಕುಗಳು ಶ್ವಾಸಕೋಶ ಸೇರಿ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಹೀಗಾಗಿ, ಲಕ್ಷಾಂತರ ಮಂದಿಗೆ ಅನಾರೋಗ್ಯ ಹಾಗೂ ಸಾವಿಗೂ ಕಾರಣವಾಗುತ್ತಿದೆ.
ನೀರು ಕುಡಿಯುವ ಪ್ಲಾಸ್ಟಿಕ್ ಬಾಟಲ್, ಆಹಾರ ಸೇವಿಸುವ ಪ್ಲಾಸ್ಟಿಕ್ ಬಾಕ್ಸ್ ಗಳು, ಕವರ್‌ಗಳು, ಆಹಾರ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್ ವಸ್ತುಗಳಲ್ಲಿ ಮೈಕ್ರೋ ಪ್ಲಾಸ್ಟಿಕ್‌ ನೇರವಾಗಿ ಬಾಯಿಯ ಮೂಲಕ ದೇಹ ಸೇರಿದರೆ, ವಾಯು ಮಾಲಿನ್ಯದಿಂದ ಹಲವು ಸೂಕ್ಷ್ಮ ಕಣಗಳು ದೇಹ ಪ್ರವೇಶಿಸುತ್ತವೆ.
ಮಾನವರು ಸೇವಿಸುವ ಆಹಾರ ಪಚನ ಕ್ರಿಯೆಯ ಮೂಲಕ ಜೀರ್ಣವಾಗಿ ಅನುಪಯುಕ್ತ ವಸ್ತುಗಳು ಮಲದ ಮೂಲಕ ದೇಹದಿಂದ ಹೊರಹೋಗುತ್ತವೆ. ಆದರೆ ಈ ಮೈಕ್ರೋಪ್ಲಾಸ್ಟಿಕ್‌ ಕಣಗಳು ಒಮ್ಮೆ ಮಾನವನ ದೇಹ ಸೇರಿದರೆ ಮತ್ತೆ ಹೊರಬರುವುದೇ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ರಕ್ತಸಂಚಾರದೊಂದಿಗೆ ಸೇರಿಹೋಗುತ್ತದೆ ಅಥವಾ ಶ್ವಾಸಕೋಶದಲ್ಲಿ ಸಿಲುಕಿಕೊಳ್ಳುತ್ತದೆ. ಮೈಕ್ರೋಪ್ಲಾಸ್ಟಿಕ್‌ ಸೇವನೆಯು ಮಾನವ ಕುಲಕ್ಕೆ ಪಿಡುಗಾಗಿ ಕಾಡುತ್ತಿದೆ.
ದೇಹದಲ್ಲಿನ ಮೈಕ್ರೋಪ್ಲಾಸ್ಟಿಕ್‌ಗಳ ಉಪಸ್ಥಿತಿಯು ಒಟ್ಟಾರೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!