ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಬೆಂಗಳೂರಿನ ಮನೆಯಲ್ಲಿ ಸಾವಿಗೆ ಶರಣಾಗಿದ್ದರು. ಇದರ ಬೆನ್ನಲ್ಲಿಯೇ ಗುರುಪ್ರಸಾದ್ ಜೀವನ ಶೈಲಿ ಹಾಗೂ ಶೋಕಿ ಜೀವನದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್ ಅವರ ವಿರುದ್ಧ ಹಲವರು ಟೀಕೆ ಮಾಡಿದ್ದರು.
ಇದೀಗ ತಮ್ಮ ಬಗ್ಗೆ ಟೀಕೆ ಮಾಡಿದವರನ್ನು ನಟ ಜಗ್ಗೇಶ್ ಅವರು ಆನೆಯ ಮುಂದೆ ಬೊಗಳುವ ನಾಯಿಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜಗ್ಗೇಶ್ ಅವರು, ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತವೆ. ಅದಕ್ಕೆ Scientific ಕಾರಣ “ಭಯ”. ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ ಮುಗಿಲೆತ್ತರ ಬೆಳದಿದೆ ಎಂಬ ಸಂಕಟ. ತಾತ್ಪಾರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು’ ಎಂದು ಬರೆದುಕೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜಗ್ಗೇಶ್ ವಿರುದ್ಧ ಅನೇಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ವಿಡಿಯೋ ಮಾಡಿ ಹಾಗೂ ಮಾಧ್ಯಮಮುಂದೆ ಬಂದು ನಟ ಜಗ್ಗೇಶ್ ವಿರುದ್ಧ ಟೀಕೆ ಮಾಡಿದ್ದರು. ಈ ಸಂಬಂಧಪಟ್ಟ ವಿಡಿಯೋವೊಂದತಲ್ಲಿ ‘ಕಾಲಾಯ ತಸ್ಮೈ ನಮಃ.. ಇವತ್ತು ಯಮ ಗುರಪ್ರಸಾದ್ ಮನೆ ಬಾಗಿಲಲ್ಲಿ ಇದ್ದ, ನಾಳೆ ಯಾರ ಮನೆಯ ಮುಂದೆ ಬೇಕಾದರೂ ಬರಬಹುದು. ವೇಯ್ಟ್ ಅಂಡ್ ಸೀ.., ನಟ ಜಗ್ಗೇಶ್‌ಗೆ ಕಮ್‌ಬ್ಯಾಕ್ ಜೀವನ ಕೊಟ್ಟಂತಹ ಗುರು @ ಗುರುಪ್ರಸಾದ್ ಅವರಿಗೆ ಒಳ್ಳೆಯ ಬಳುವಳಿ ಕೊಟ್ಟೆ. ನಿನಗೆ ಕೆರೆತ ಬಂತಾ, ಕಿವಿಯಲ್ಲಿ ರಕ್ತ ಬರುತ್ತಿದೆಯಾ.? ನಿನ್ನ ತಿನ್ನುವ ಅನ್ನದ ತಟ್ಟೆ ಕಿತ್ತುಕೊಳ್ಳುತ್ತಿದ್ದನಾ? ಎಂತಹ ವಿಕೃತವಾದ ಮನಸ್ಸು ನಿಂದು. ಇದನ್ನು ನಾನು ನಂಬಲೂ ಸಾಧ್ಯವಾಗುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದ್ದರು..