ಉತ್ತರ ಪ್ರದೇಶ ಚುನಾವಣೆ: ಒಟ್ಟು ಆಸ್ತಿ ಘೋಷಣೆ ಮಾಡಿದ ಯೋಗಿ ಆದಿತ್ಯನಾಥ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಸಿದ್ಧತೆ ಬರದಿಂದ ಸಾಗುತ್ತಿದ್ದು, ಇಂದು ಯೋಗಿ ಆದಿತ್ಯನಾಥ್​ ಗೋರಖ್​ಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಒಟ್ಟು ಆಸ್ತಿ ಎಷ್ಟು ಘೋಷಣೆ ಮಾಡಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಅಫಡವಿಟ್​​ನಲ್ಲಿ ಯೋಗಿ ಆದಿತ್ಯನಾಥ್​​ 1,54,94,054 ರೂಪಾಯಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಆರು ಬ್ಯಾಂಕ್ ಖಾತೆ ಹೊಂದಿರುವುದಾಗಿ ಯೋಗಿ ತಿಳಿಸಿದ್ದಾರೆ.
ಇನ್ನುಅವರ ಬಳಿ 12 ಸಾವಿರ ರೂ. ಮೌಲ್ಯದ ಮೊಬೈಲ್​ ಫೋನ್ ಇದೆ. ಉಳಿದಂತೆ 1 ಲಕ್ಷ ರೂ. ಮೌಲ್ಯದ ರಿವಾಲ್ವರ್ ಮತ್ತು 80 ಸಾವಿರ ರೂಪಾಯಿ ಮೌಲ್ಯದ ರೈಫಲ್​ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇನ್ನು 49 ಸಾವಿರ ರೂ. ಮೌಲ್ಯದ ಚಿನ್ನದ ಆಭರಣ, 20 ಸಾವಿರ ಮೌಲ್ಯದ ಚಿನ್ನದ ಸರ ಮತ್ತು ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಇರುವುದಾಗಿ ತಿಳಿಸಿದ್ದಾರೆ.
ಅಫಿಡವಿಟ್ ಪ್ರಕಾರ 2022-21ರಲ್ಲಿ 13,20,653 ರೂ., 2019-20ನೇ ಸಾಲಿನಲ್ಲಿ 15,68,799 ರೂ. ಆದಾಯ, 2018-19ನೇ ಸಾಲಿನಲ್ಲಿ 18,27,639 ರೂ. ಮತ್ತು 2018-19ನೇ ಸಾಲಿನಲ್ಲಿ 18,27,639 ರೂ.ಗಳ ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ.
ಚುನಾವಣಾ ಅಫಡವಿಟ್ ಪ್ರಕಾರ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್​ಗಳು ದಾಖಲಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!