Wednesday, July 6, 2022

Latest Posts

ಯೋಗಿ ಸರ್ಕಾರದಿಂದ ಮೇಜರ್‌ ಸರ್ಜರಿ, 21ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಧಿಕಾರಶಾಹಿ ಪುನಾರಚನೆಯ ಭಾಗವಾಗಿ 21 ಐಎಎಸ್ ಅಧಿಕಾರಿಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ವರ್ಗಾವಣೆ ಮಾಡಿದೆ. ಲಕ್ನೋ, ಕಾನ್ಪುರ, ಗೋರಖ್‌ಪುರ ಸೇರಿದಂತೆ 6 ಪ್ರದೇಶಗಳ ಅಧಿಕಾರಿಗಳು ಸಹ ಈ ವರ್ಗಾವಣೆ ಪಟ್ಟಿಯಲ್ಲಿದ್ದಾರೆ. ಕಳೆದ ವಾರ ಕಾನ್ಪುರದಲ್ಲಿ ನಡೆದ ಹಿಂಸಾಚಾರದತ್ತ ಸರ್ಕಾರ ಗಮನ ಹರಿಸಿದ್ದು, ಈ ನಿರ್ಧಾರ ಕೈಗೊಂಡಿದೆ.

ಗಲಾಟೆ ಬಳಿಕ ಕಾನ್ಪುರ ಡಿಎಂ ನೇಹಾ ಶರ್ಮಾ ಅವರನ್ನು ಸ್ಥಳೀಯ ಸಂಸ್ಥೆಗಳ ನಿರ್ದೇಶಕಿಯಾಗಿ ನೇಮಿಸಲಾಗಿದೆ. ಸಮಯಕ್ಕೆ ಸರಿಯಾಗಿ ಸ್ಪಂದಿಸದ ಕಾರಣದಿಂದಾಗಿಯೇ ಹಿಂಸಾಚಾರ ಸಂಭವಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಶರ್ಮಾ ಜೊತೆಗೆ ಇತರೆ ಒಂಭತ್ತು ಜಿಲ್ಲೆಗಳ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಬಲ್ಲಿಯಾ, ಅಲಿಗಢ, ಬಸ್ತಿ, ಜಲೌನ್, ಇಟಾವಾ, ಫಿರೋಜಾಬಾದ್ ಮತ್ತು ಗೋರಖ್‌ಪುರದ ಅಧಿಕಾರಿಗಳು ಸಹ ವರ್ಗಾವಣೆಯಾಗಿದ್ದಾರೆ.

 • ಕೃಷ್ಣ ಕರುಣೇಶ್- ಗೋರಖ್‌ಪುರಕ್ಕೆ ವರ್ಗಾವಣೆ.
 • ವಿಜಯ್ ಕಿರಣ್ ಆನಂದ್- ಶಾಲಾ ಶಿಕ್ಷಣದ ಪ್ರಭಾರ ನಿರ್ದೇಶಕರಾಗಿ, ಮೂಲ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಕ
 • ಅನಾಮಿಕಾ ಸಿಂಗ್- ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ, ಪೋಷಣೆ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ
 • ಸೂರ್ಯಪಾಲ್ ಗಂಗ್ವಾರ್-  ಲಕ್ನೋ ಡಿಎಂ ಆಗಿ ನೇಮಕ
 • ಅಭಿಷೇಕ್ ಪ್ರಕಾಶ್- ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಕಾರ್ಯದರ್ಶಿ ಹುದ್ದೆ.
 • ವಿಶಾಖ್ ಜಿ- ಕಾನ್ಪುರ ನಗರದ ಹೊಸ ಡಿಎಂ ಆಗಿ ನೇಮಕ.
 • ಭವಾನಿ ಸಿಂಗ್ ಖಗರೌತ್-ಮಧ್ಯಾಂಚಲ್ ವಿದ್ಯುತ್ ವಿತ್ರನ್ ನಿಗಮದ ಎಂಡಿ
 • ಅನುಪಮ್ ಶುಕ್ಲಾ-ವಿಶೇಷ ಇಂಧನ ಕಾರ್ಯದರ್ಶಿ
 • ನೀಲಂ ಸಾಯಿ- ಜೌನ್‌ಪುರದ ಹೊಸ ಸಿಡಿಒ
 • ಸೆಲ್ವ ಕುಮಾರಿ-ಬರೇಲಿಯ ನೂತನ ಆಯುಕ್ತರಾಗಿ ನೇಮಕ

 • ಸೌಮ್ಯಾ ಅಗರ್ವಾಲ್-ಬಲ್ಲಿಯಾ ಡಿಎಂ ಆಗಿ ನೇಮಕ.
 • ಇಂದರ್ ವಿಕ್ರಮ್ ಸಿಂಗ್-ಅಲಿಗಢದ ಹೊಸ ಡಿಎಂ
 • ಪ್ರಿಯಾಂಕಾ ನಿರಂಜನ್-ಬಸ್ತಿಯ ನೂತನ ಡಿಎಂ
 • ಚಾಂದಿನಿ ಸಿಂಗ್- ಜಲೌನ್‌ನ ಹೊಸ ಡಿಎಂ 

ಯೋಗಿ ಸರ್ಕಾರ ರಾಜ್ಯದಲ್ಲಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಪ್ರಮುಖ ವರ್ಗಾವಣೆಯಾಗಿದೆ. ಉತ್ತರ ಪ್ರದೇಶ ಸರ್ಕಾರ ಕಳೆದ ತಿಂಗಳು 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss