ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇತ್ತ ದರ್ಶನ್ ಪುತ್ರ ವಿನೀಶ್ ಫಾದರ್ಸ್ ಡೇಗೆ ಭಾವುಕ ಪೋಸ್ಟ್ ಮಾಡಿ ಅಪ್ಪನಿಗೆ ವಿಶ್ ಮಾಡಿದ್ದು , ಇದರ ಬೆನ್ನಲ್ಲೇ ಪವಿತ್ರಾ ಗೌಡ ಮಗಳು ಕೂಡಾ ತಾಯಿಗೆ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಇಂದು ಎಲ್ಲೆಡೆ ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತಿದೆ.ಈ ದಿನವನ್ನು ಬಹುತೇಕರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಚ್ಚಿನ ತಂದೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಮಗಳು ಖುಷಿ ಕೂಡ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಾಯಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾಳೆ.
ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿಕೊಂಡ ಖುಷಿ ಗೌಡ, ‘ನನ್ನ ಬದುಕಿನಲ್ಲಿ ಎಲ್ಲವೂ ನೀನೆ’ ಎಂದು ಬರೆದಿದ್ದಾಳೆ. ತಾಯಿ ಪವಿತ್ರಾ ಗೌಡಗೆ ಟ್ಯಾಗ್ ಮಾಡಿದ್ದಾಳೆ. ಮಗಳು ಖುಷಿಯ ಹಣೆಗೆ ಪವಿತ್ರಾ ಮುತ್ತಿಡುವ ಫೋಟೋ ಹಂಚಿಕೊಂಡಿದ್ದಾಳೆ.