ನನ್ನ ಬದುಕಿನಲ್ಲಿ ಎಲ್ಲವೂ ನೀನೆ: ಪವಿತ್ರಾ ಗೌಡ ಜೊತೆಗಿನ ಫೋಟೋ ಹಂಚಿಕೊಂಡ ಪುತ್ರಿ ಖುಷಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​, ಗೆಳತಿ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಇತ್ತ ದರ್ಶನ್​ ಪುತ್ರ ವಿನೀಶ್​​ ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌ ಮಾಡಿ ಅಪ್ಪನಿಗೆ ವಿಶ್ ಮಾಡಿದ್ದು , ಇದರ ಬೆನ್ನಲ್ಲೇ ಪವಿತ್ರಾ ಗೌಡ ಮಗಳು ಕೂಡಾ ತಾಯಿಗೆ ವಿಶ್​​ ಮಾಡಿ ಪೋಸ್ಟ್​​ ಮಾಡಿದ್ದಾರೆ.

ಇಂದು ಎಲ್ಲೆಡೆ ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತಿದೆ.ಈ ದಿನವನ್ನು ಬಹುತೇಕರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಚ್ಚಿನ ತಂದೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಮಗಳು ಖುಷಿ ಕೂಡ ಪೋಸ್ಟ್​ ಹಂಚಿಕೊಳ್ಳುವ ಮೂಲಕ ತಾಯಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾಳೆ.

ಇನ್​​ಸ್ಟಾಗ್ರಾಮ್​​ನಲ್ಲಿ ಸ್ಟೇಟಸ್​ ಹಾಕಿಕೊಂಡ ಖುಷಿ ಗೌಡ, ‘ನನ್ನ ಬದುಕಿನಲ್ಲಿ ಎಲ್ಲವೂ ನೀನೆ’ ಎಂದು ಬರೆದಿದ್ದಾಳೆ. ತಾಯಿ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾಳೆ. ಮಗಳು ಖುಷಿಯ ಹಣೆಗೆ ಪವಿತ್ರಾ ಮುತ್ತಿಡುವ ಫೋಟೋ ಹಂಚಿಕೊಂಡಿದ್ದಾಳೆ.

News18

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!