ನೀವು ‘ಶಕ್ತಿ ಸ್ವರೂಪ: ಸಂದೇಶಖಾಲಿ ಸಂತ್ರಸ್ತೆ, ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಜೊತೆ ಪ್ರಧಾನಿ ಮೋದಿ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಮತ್ತು ಸಂದೇಶ್​ಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ (Rekha Patra) ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.

ಈ ವೇಳೆ ಪ್ರಧಾನಿ ಮೋದಿ ಜೊತೆ  ರೇಖಾ ಅವರು, ಸಿದ್ಧತೆಗಳು ಮತ್ತು ಬಿಜೆಪಿಗೆ ಜನರ ಬೆಂಬಲದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ . ಪ್ರಧಾನಿ ಆಕೆಯನ್ನು ‘ಶಕ್ತಿ ಸ್ವರೂಪ’ ಎಂದು ಬಣ್ಣಿಸಿದ್ದಾರೆ.

ಈ ವೇಳೆ ತೃಣಮೂಲ ಕಾಂಗ್ರೆಸ್ ನಾಯಕರಿಂದ ಕಿರುಕುಳದ ಆರೋಪ ಎದುರಿಸುತ್ತಿರುವ ದ್ವೀಪದ ಜನರ ಸಂಕಷ್ಟಗಳ ಬಗ್ಗೆ ಶ್ರೀಮತಿ ಪಾತ್ರಾ ಪ್ರಧಾನಿಗೆ ತಿಳಿಸಿದರು.

“ನೀವು ಸಂದೇಶ್​ಖಾಲಿಯಲ್ಲಿ ದೊಡ್ಡ ಹೋರಾಟವನ್ನು ಮಾಡಿದ್ದೀರಿ, ನೀವು ಶಕ್ತಿ ಸ್ವರೂಪ. ಅಂತಹ ಶಕ್ತಿಶಾಲಿಗಳನ್ನು ನೀವು ಜೈಲಿಗೆ ಕಳುಹಿಸಿದ್ದೀರಿ. ನೀವು ತುಂಬಾ ಧೈರ್ಯದ ಕಾರ್ಯವನ್ನು ಮಾಡಿದ್ದೀರಿ ”ಎಂದು ಪ್ರಧಾನಿ ಪತ್ರಾ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾರೆ.

‘ಮಹಿಳೆಯರ ಬೆಂಬಲದಿಂದಾಗಿ ನಾನು ಅದನ್ನು ಮಾಡಲು ಸಾಧ್ಯವಾಯಿತು. ಅವರು ತೋರಿಸಿದ ಹಾದಿಯಲ್ಲಿ ನಾನು ಸಾಗುತ್ತೇನೆ ಮತ್ತು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ” ಎಂದು ಪಾತ್ರಾ ಉತ್ತರಿಸಿದ್ದಾರೆ.

ಸಂದೇಶ್​ಖಾಲಿ ಮಹಿಳೆಯರು ಧ್ವನಿ ಎತ್ತುವುದು ಸಾಮಾನ್ಯ ವಿಷಯವಲ್ಲ. ನಿಮ್ಮ ಧೈರ್ಯವು ಬಂಗಾಳದ ನಾರಿ ಶಕ್ತಿಯು ನಮ್ಮನ್ನು ಆಶೀರ್ವದಿಸುತ್ತದೆ ಎಂದು ತೋರಿಸುತ್ತದೆ. ಕೇಂದ್ರದಿಂದ ಆಗಿರುವ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಒತ್ತಾಯಿಸುತ್ತೇನೆ. ಬಂಗಾಳದ ಟಿಎಂಸಿ ಸರ್ಕಾರದಿಂದ ಜನರು ಬೇಸತ್ತಿದ್ದಾರೆ, ಇದು ರಾಜ್ಯದಲ್ಲಿ ಕೇಂದ್ರ ಯೋಜನೆಗಳನ್ನು ಜಾರಿಗೆ ತರಲು ಬಿಡುವುದಿಲ್ಲಎಂದು ಪಾತ್ರಾ ಜತೆ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ 19 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಸಂದೇಶ್​ಖಾಲಿ ಪ್ರದೇಶಕ್ಕೆ ಒಳಪಡುವ ಬಸಿರ್ಹತ್ ಕ್ಷೇತ್ರದಿಂದ ರೇಖಾ ಪಾತ್ರಾ ಅವರನ್ನು ಕಣಕ್ಕಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!