ಸಾಮಾಗ್ರಿಗಳು
ಬಾದಾಮಿ
ತುಪ್ಪ
ಬತ್ತಿ
ಮಾಡೋದು ಹೇಗೆ?
ನೀವು ಮನೆಯಲ್ಲಿಯೇ ಕೆಮಿಕಲ್ ಫ್ರೀ ಕಾಜಲ್ ತಯಾರಿಸಬಹುದು. ಅದಕ್ಕಾಗಿ ಒಂದು ದೀಪ ತೆಗೆದುಕೊಂಡು ಅದಕ್ಕೆ ತುಪ್ಪದಲ್ಲಿ ಅದ್ದಿದ ಬತ್ತಿಯನ್ನು ಹಾಕಿ ಅದರ ಮೇಲೆ ಒಂದೆರಡು ಬಾದಾಮಿ ಇಟ್ಟು ದೀಪ ಬೆಳಗಿಸಿ, ನಂತರ ಜ್ವಾಲೆಗೆ ಒಂದು ಪ್ಲೇಟ್ ಮುಚ್ಚಿ. ದೀಪ ಆರಿದ ಮೇಲೆ ಆ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಸಂಗ್ರಹವಾದ ಕಪ್ಪು ಬಣ್ಣದ ಪುಡಿಯನ್ನು ಸಂಗ್ರಹಿಸಿ ಅದಕ್ಕೆ ತುಪ್ಪ ಅಥವಾ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ಡಬ್ಬದಲ್ಲಿ ಸಂಗ್ರಹಿಸಿದರೆ, ಸುಲಭವಾಗಿ ತಯಾರಾಗುತ್ತೆ ಕೆಮಿಕಲ್ ಫ್ರೀ ಕಾಜಲ್.