ಟೊಮ್ಯಾಟೊ ಬಾತ್, ಪಲಾವ್, ಮೆಂತ್ಯೆ ರೈಸ್, ಮಶ್ರೂಮ್ ಪಲಾವ್ ಎಲ್ಲದಕ್ಕೂ ಸೇಮ್ ಪ್ರೊಸೆಸ್ ಬಳಕೆ ಮಾಡಬಹುದು..
ಹೇಗೆ ಮಾಡೋದು?
ಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಒಂದೆರಡು ಹಸಿಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಟೊಮ್ಯಾಟೊ ಹಾಕಿ, ಅರಿಶಿಣ ಹಾಕಿ ಮಿಕ್ಸ್ ಮಾಡಿ, ನಂತರ ತರಕಾರಿಗಳನ್ನು ಹಾಕಿ, ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಪುಲಾವ್ ಮಸಾಲಾ ಹಾಕಿ
ನಂತರ ಅಕ್ಕಿ, ಕೊತ್ತಂಬರಿ ಹಾಗು ನೀರು ಹಾಕಿ ವಿಶಲ್ ಹೊಡೆಸಿದ್ರೆ ಪಲಾವ್ ರೆಡಿ