ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ರ ಸಂದರ್ಶನವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಜನರಿಂದ ಭಾರೀ ಮೆಚ್ಚುಗೆಗೆ ಕೂಡ ಸಿಗುತ್ತಿದೆ.
‘ಸರ್ಕಾರದಿಂದ ಒಂದು ರೋಡ್ ಮಾಡಿಸಿರ್ತಾರೆ.. ಅದ್ರಲ್ಲಿ ಟ್ರಾಕ್ಸ್ ಹಾಕಿರ್ತಾರೆ, ಯಾರು ಎಲ್ಲಿ ಹೋಗ್ಬೇಕು ಅನ್ನೋ ಸೂಚನೆ ಕೂಡ ಸ್ಪಷ್ಟವಾಗಿ ಇರುತ್ತೆ.. ಯಾಕೆ ಅದೆಲ್ಲಾ ಮಾಡಿರ್ತಾರೆ? ಯಾರೂ ಕೂಡ ನಮ್ಮಪ್ಪನ ಮನೆ ರಸ್ತೆ ಅಂತ ಓಡಾಡ್ಬಾರ್ದು.. ಆದ್ರೆ ಆ ಟ್ರಾಕ್‌ಅನ್ನ ಬದಲಾಯ್ಸಕೊಂಡು, ಆ ಕಡೆ ಈ ಕಡೆ ಅಂತ ಹೋಗ್ತಾ ಇದ್ರೆ ನಿಮ್ ನಮ್ ಪಕ್ಕ ಬರ್ತಾ ಇರೋವ್ನಿಗೆ ತೊಂದ್ರೆ ಆಗುತ್ತೆ.. ನೀವು ಎರ್ರಾಬಿರ್ರಿ ಹೋಗಿ ನಿಮ್ ಹಿಂದೆ ಅಥವಾ ಪಕ್ಕ ಬರ್ತಾ ಇರೋರಿಗೆ ಸಮಸ್ಯೆ ಮಾಡ್ತೀರ..
ತೊಂದ್ರೆ ಕೊಟ್ಟಿರೋ ನೀವು ಬದುಕಿಬಿಡ್ಬಹುದು, ಆದ್ರೆ ಏನೂ ತಪ್ಪು ಮಾಡದೇ ನಿಯತ್ತಾಗಿ ಬರ್ತಾ ಇರೋ ಅವ್ರು ಸಾಯಲೂಬಹುದು. ಇಂಥ ಲಾಗಳನ್ನ ಫಾಲೋ ಮಾಡೋಕೆ ಹೈಲಿ ಎಜ್ಯಕೇಶನ್ ಏನೂ ಬೇಕಾಗಿಲ್ಲ.. ಡಿಗ್ರಿ, ಪಿಹೆಚ್‌ಡಿ ಮಾಡ್ಬೇಕಾಗಿಲ್ಲ.. ಬೇಕಾಗಿರೋದು ಸಿಂಪಲ್ ಕಾಮನ್ ಸೆನ್ಸ್ ಎಂದಿದ್ದಾರೆ ನಟ ಸುದೀಪ್.