ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ನೀಡಿರುವ ಸಮನ್ಸ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಗೆ ಹಿನ್ನಡೆಯಾಗಿದ್ದು, ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ.
ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ, ‘ಇಂತಹ ಪ್ರಕರಣಗಳಲ್ಲಿ ನೇರವಾಗಿ ಇಲ್ಲಿ ಅಲ್ಲ, ಹೈಕೋರ್ಟ್ ನಿಂದ ಬರಬೇಕು. ನೀವು ಹೈಕೋರ್ಟ್ ಗೆ ಏಕೆ ಹೋಗಲಿಲ್ಲ?’ ಸೊರೇನ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಪೀಠವು, ‘ರೋಹಟಗಿ ಜೀ, ನೀವೇಕೆ ಹೈಕೋರ್ಟ್ ಗೆ ಹೋಗಬಾರದು? ಇಲ್ಲ, ನೀವು ಹೈಕೋರ್ಟ್ ಗೆ ಹೋಗಿ. ಅರ್ಜಿಯನ್ನು ಹಿಂಪಡೆಯಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಅರ್ಜಿ ಹಿಂಪಡೆಯದಿದ್ದರೆ ತಿರಸ್ಕರಿಸಲಾಗುತ್ತದೆ ಎಂದು ಹೇಳಿತು.
ನಾಲ್ಕನೇ ಬಾರಿಗೆ ಸಮನ್ಸ್ ಪಡೆದಿದ್ದ ಸೋರೆನ್ ಏತನ್ಮಧ್ಯೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಸೆಪ್ಟೆಂಬರ್ 23ರಂದು ಹಾಜರಾಗುವಂತೆ ಇಡಿ ಮತ್ತೆ ಸಮನ್ಸ್ ಕಳುಹಿಸಿದೆ.