ಲೂಟಿ ಮಾಡಿದ ದೇಶದ ದುಡ್ಡನ್ನು ನೀವು ಕೊಡಲೇಬೇಕು: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಇಂದು ಎಲ್ಲಾ ತನಿಖೆ ಸಂಸ್ಥೆಗಳು ಸರ್ವ ಸ್ವತಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದಲ್ಲಿ ಮಾತನಾಡಿ, ಯುಪಿಎ ಅಧಿಕಾರದ ಸಮಯದಲ್ಲಿ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಮಾತ್ರವೇ ಬಳಕೆ ಮಾಡಲಾಗುತ್ತಿತ್ತು. ನಾನು ಈ ಬಗ್ಗೆ ಸ್ವಲ್ಪ ಬೆಳೆಕು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಿದ್ದೇನೆ. ಪಿಎಂಎಲ್‌ಎ (ಪ್ರಿವೆನ್ಶನ್‌ ಆಫ್‌ ಮನಿ ಲಾಂಡರಿಂಗ್‌ ಆಕ್ಟ್‌) ಅಡಿಯಲ್ಲಿ ನಾವು ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟ ಪ್ರಕರಣಗಳನ್ನು ದಾಖಲು ಮಾಡಿದ್ದೇವೆ . ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿ ನಿರ್ದೇಶನಾಲಯ 5 ಸಾವಿರ ಕೋಟಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಈವರೆಗೂ 1 ಲಕ್ಷ ಕೋಟಿ ಮೌಲ್ಯದ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲೂಟಿ ಮಾಡಿದ ದೇಶದ ದುಡ್ಡನ್ನು ನೀವು ಕೊಡಲೇಬೇಕು ಎಂದು ಮೋದಿ ಹೇಳಿದ್ದಾರೆ.

ಅಧೀರ್‌ ಬಾಬು (ಅಧೀರ್‌ ರಂಜನ್‌ ಚೌಧರಿ) ಬಂಗಾಳದವರು. ಅಲ್ಲಿನ ನೋಟುಗಳ ರಾಶಿಯನ್ನು ಅವರು ಈಗಾಗಲೇ ನೋಡಿದ್ದಾರೆ. ಯಾರ ಯಾರ ಮನೆಯಲ್ಲಿ, ಯಾವೆಲ್ಲಾ ರಾಜ್ಯದಲ್ಲಿ ಸಿಕ್ಕಿ ಬೀಳ್ತಾ ಇದ್ದಾರೆ ಅನ್ನೋದನ್ನ ನೋಡಿದ್ದಾರೆ. ನೋಟುಗಳ ರಾಶಿಯನ್ನು ನೋಡಿ ದೇಶವೇ ಅಚ್ಚರಿಪಟ್ಟಿದೆ. ಆದರೆ, ಈಗ ಜನರನ್ನು ನೀವು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಜನರೇ ಎಲ್ಲವನ್ನೂ ನೋಡುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 10-15 ಲಕ್ಷ ಕೋಟಿಯ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗ್ತಿತ್ತು. ಆದರೆ, ನಾವು ಲಕ್ಷ ಲೂಟಿ ಮಾಡಿದವರನ್ನು ಹಿಡಿದು ಆ ಹಣವನ್ನು ಬಡವರ ಕಲ್ಯಾಣಕ್ಕೆ ಖರ್ಚು ಮಾಡಿದ್ದೇವೆ ಎಂದು ಹೇಳಿದರು.

ಇಂದು ಮಧ್ಯವರ್ತಿಗಳಿಗೆ ಬಡವರನ್ನು ಲೂಟಿ ಮಾಡುವುದು ಕಷ್ಟವಾಗುತ್ತಿದೆ. ಡಿಬಿಟಿ, ಜನ್ ಧನ್, ಆಧಾರ್ ಮತ್ತು ಮೊಬೈಲ್ ಫೋನ್‌ ಮೂಲಕ ಶಕ್ತಿಯನ್ನು ನಾವು ಗುರುತಿಸಿದ್ದೇವೆ. ₹30 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇವೆ. ಸರ್ಕಾರ ಕಳುಹಿಸಿದ 100 ರಲ್ಲಿ ಬಡವರು ಕೇವಲ ₹ 15 ಸ್ವೀಕರಿಸುತ್ತಾರೆ ಎಂದು ಕಾಂಗ್ರೆಸ್‌ನ ಪ್ರಧಾನಿಯೊಬ್ಬರು ಹೇಳಿದ್ದರು ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದಲ್ಲಿ ಹಣದುಬ್ಬರದ ವಿಚಾರವಾಗಿ ಎರಡು ಹಾಡುಗಳು ಸಖತ್‌ ಫೇಮಸ್‌ ಆಗಿದೆ. ‘ಮೆಹಂಗಾಯಿ ಮಾರ್‌ ಗಯಿ..’, ‘ಮೆಹಂಗಾಯಿ ಗಾಯಿನ್‌ ಖಾಯೆ ಜಾತ್‌ ಹೇ..’ ಎನ್ನುವ ಫೇಮಸ್‌ ಹಾಡುಗಳು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಬಂದಿದ್ದಾರೆ. ಯುಪಿಎ ಅವಧಿಯಲ್ಲಿ ಹಣದುಬ್ಬರ ಎರಡಂಕಿಯಲ್ಲಿತ್ತು ಅನ್ನೋದನ್ನ ಎಲ್ಲರೂ ನೋಡಿದ್ದಾರೆ. ಆದರೆ, ಅದು ಅವರು ತಿರಸ್ಕರಿಸುತ್ತಲೇ ಇದ್ದಾರೆ. ಹಾಗಿದ್ದರಡ ಅವರ ಸರ್ಕಾರದ ಲಾಜಿಕ್‌ ಏನು ಅನ್ನೋದೇ ಅರ್ಥವಾಗುತ್ತಿದೆ. ಹಣದುಬ್ಬರದ ಬಗ್ಗೆ ಪ್ರಶ್ನೆ ಮಾಡಿದ್ರೆ, ‘ದುಬಾರಿ ಐಸ್‌ ಕ್ರೀಮ್‌ ತಿನ್ನಲು ಹಣ ಇರುತ್ತದೆ, ಹಣದುಬ್ಬರ ಸ್ವಲ್ಪ ಹೆಚ್ಚಾದ್ರೆ ಏನಾಗುತ್ತದೆ ಅನ್ನುತ್ತಿದ್ದರು. ಯಾವಾಗೆಲ್ಲಾ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆಯೋ ಆಗೆಲ್ಲಾ, ಹಣದುಬ್ಬರವನ್ನು ಬಲಿಷ್ಠ ಮಾಡಿದೆ ಎಂದು ಮೋದಿ ಟೀಕಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!