ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಈ ವೀರರ ಬಗ್ಗೆ ನೀವು ತಿಳಿಯಲೇಬೇಕು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶ್ಯಾಮ್ ಬಿಹಾರಿ ಪ್ರಸಾದ್ (ಬಿಹಾರ)
ಶ್ಯಾಮ್ ಬಿಹಾರಿ ಪ್ರಸಾದ್ ಬಿಹಾರದ ಬೇನಿಪುರ್ ಜಿಲ್ಲೆಯ ಗಯಾ ಗ್ರಾಮದ ನಿವಾಸಿ. ಇವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1942 ರ ಆಗಸ್ಟ್ 15ರಂದು ಕುರ್ತಾ ಠಾಣಾ ಕಟ್ಟಡದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಅವರು ಮೆರವಣಿಗೆಯನ್ನು ನಡೆಸುತ್ತಿದ್ದಾಗ, ಪೊಲೀಸ್ ಜಮಾದಾರ್ ಒಬ್ಬ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಶ್ಯಾಮ್ ಬಿಹಾರಿ ಪ್ರಸಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಜ್ಞಾನ್ ಸಿಂಗ್ (ಅಂಡಮಾನ್‌)
ಜ್ಞಾನ್ ಸಿಂಗ್ ಪಂಜಾಬ್ ಮೂಲದವರು. ದಕ್ಷಿಣ ಅಂಡಮಾನ್‌ನ ಹೊಂಫ್ರೇಗುಂಜ್ ಗ್ರಾಮದಲ್ಲಿ ವಾಸವಾಗಿದ್ದರು. ವೃತ್ತಿಯಲ್ಲಿ ಸಿವಿಲ್ ಗುತ್ತಿಗೆದಾರರಾಗಿದ್ದ ಜ್ಞಾನ್ ಸಿಂಗ್, ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (IIL)ನ ಸಕ್ರಿಯ ಸದಸ್ಯರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಕಾರಣಕ್ಕೆ ಅವರನ್ನು ಅಕ್ಟೋಬರ್ 1943 ರಲ್ಲಿ ಬಂಧಿಸಿ ಸೆಲ್ಯುಲಾರ್ ಜೈಲಿನಲ್ಲಿ ಇಡಲಾಯಿತು. ಅವರ ಸೆರೆವಾಸದ ಸಮಯದಲ್ಲಿ, ಅವರು ಕ್ರೂರ ಚಿತ್ರಹಿಂಸೆಯನ್ನು ಅನುಭವಿಸಬೇಕಾಯಿತು. 1944 ರ ಜನವರಿ 30 ರಂದು ಅವರು ಜಪಾನಿನ ಫೈರಿಂಗ್ ಸ್ಕ್ವಾಡ್ನಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಅವರ ಮೃತದೇಹವನ್ನು ದಕ್ಷಿಣ ಅಂಡಮಾನ್‌ನ ಹೋಮ್‌ಫ್ರೇಗಂಜ್‌ನಲ್ಲಿ ಇತರೆ 43 ಹೋರಾಟಗಾರರೊಂದಿಗೆ ‘ಎಲ್’ ಆಕಾರದ ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು. ಅವರು ಹುತಾತ್ಮರಾದ ಸ್ಥಳದಲ್ಲಿ ಅವರ ಸ್ಮರಣಾರ್ಥ ‘ಬಲಿದಾನ ವೇದಿಕೆ’ ಎಂಬ ಸ್ಮಾರಕವನ್ನು ನಿರ್ಮಿಸಲಾಗಿದೆ.

ಕೊಯಿಲಕುಂಟ್ಲ ನರಸಿಂಹ ರೆಡ್ಡಿ( ಆಂಧ್ರ ಪ್ರದೇಶ)
ರಾಯಲಸೀಮಾ ಪ್ರದೇಶದಲ್ಲಿ ಕೊಯಿಲಕುಂಟ್ಲ ನರಸಿಂಹ ರೆಡ್ಡಿ ನೇತೃತ್ವದಲ್ಲಿ ಪ್ರಬಲ ದಂಗೆ ನಡೆಯಿತು. ರೆಡ್ಡಿ ಚಿಕ್ಕ ವಯಸ್ಸಿನಲ್ಲೇ ಬ್ರಿಟಿಷರ ದಬ್ಬಾಳಿಕೆಯ ಕಂದಾಯ ನೀತಿ ವಿರುದ್ಧ ದಂಗೆ ಎದ್ದರು. 1846 ರಲ್ಲಿ ನರಸಿಂಹ ರೆಡ್ಡಿ ಮದ್ರಾಸಿನಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. 1846 ರ  23 ಜುಲೈ ನಿಂದ  1847 ಫೆಬ್ರವರಿ 22 ರಲ್ಲಿ ಸೆರೆಯಾಗುವವರೆಗೆ  ಕೊಯಿಲಾ ಕುಂಟ್ಲಾದಲ್ಲಿ ಪ್ರದೇಶದಲ್ಲಿ ರೆಡ್ಡಿ ನಡೆಸಿದ ವೀರೋಚಿತ ಹೋರಾಟ ಹಾಗೂ ಪ್ರಬಲ ದಂಗೆಗೆ ಜನರಲ್ ಆಂಡರ್ಸನ್ ನೇತೃತ್ವದ ಇಂಗ್ಲಿಷ್ ಸೈನ್ಯ ಬಸವಳಿದು ಹೋಗಿತ್ತು. ಅಂತಿಮವಾಗಿ ಸೆರೆಸಿಕ್ಕ ಬಳಿಕ ಮರಣದಂಡನೆಗೆ ಈಡು ಮಾಡಲಾಯಿತು. ನರಸಿಂಹ ರೆಡ್ಡಿ ಅವರ ತಲೆಯನ್ನು 1877 ರವರೆಗೆ ನೊಸಾಮ್ ಕೋಟೆಯ ಧ್ವಾರ ಬಾಗಿಲಿನಲ್ಲಿ ನೇತುಹಾಕಲಾಗಿತ್ತು. ಕೊಯಿಲ್ಕುಂಟ್ಲ ನರಸಿಂಹ ರೆಡ್ಡಿಯ ವೀರತ್ವ ಮತ್ತು ದೇಶಭಕ್ತಿಯು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!