ನಿಮ್ಮ ಉಡುಗೊರೆಯಿಂದ ನನ್ನ ಅಮ್ಮನನ್ನು ನೆನಪಿಸಿದ್ದೀರಿ: ‘ಚುರ್ಮಾ’ ನೀಡಿದ ನೀರಜ್ ತಾಯಿಗೆ ‘ಪ್ರಧಾನಿ ಮೋದಿ’ ಭಾವುಕ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನಾನು ಹಾಗೂ ನೀರಜ್ ಆಗಾಗ್ಗೆ ಚುರ್ಮಾ ಬಗ್ಗೆ ಚರ್ಚಿಸುತ್ತೇವೆ. ಆದರೆ ಅದನ್ನು ಸೇವಿಸಿದ ನಂತರ ನಾನು ಭಾವುಕನಾಗಿದ್ದೇನೆ. ಈ ಪ್ರೀತಿ ತುಂಬಿದ ಉಡುಗೊರೆ ನನಗೆ ನನ್ನ ತಾಯಿ ನೆನಪಾದರು ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮಂಗಳವಾರ ಜಮೈಕಾದ ಪ್ರಧಾನಿಯವರ ಭೇಟಿಯ ಸಂದರ್ಭ ಆಯೋಜಿಸಿದ್ದ ಭೋಜನಾ ಕೂಟದಲ್ಲಿ ನಾನು ನೀರಜ್ ಭಾಯ್ (ನೀರಜ್ ಚೋಪ್ರಾ) ಅವರನ್ನು ಭೇಟಿಯಾದೆ. ನೀವು (ಸರೋಜಾ ದೇವಿ) ತಯಾರಿಸಿದ ಚುರ್ಮಾವನ್ನು ಅವರು ನನಗೆ ನೀಡಿದಾಗ ತುಂಬಾ ಸಂತೋಷವಾಯಿತು. ತಾಯಿ ಧೈರ್ಯ, ಪ್ರೀತಿ ಮತ್ತು ಸಮರ್ಪಣೆಯ ಸಾಕಾರಮೂರ್ತಿ. ನವರಾತ್ರಿಯ ಒಂದು ದಿನ ಮುಂಚಿತವಾಗಿ ನನಗೆ ಈ ಊಟ ಸಿಕ್ಕಿದ್ದು ಕಾಕತಾಳೀಯ. ನಾನು ನವರಾತ್ರಿ ದಿನಗಳಲ್ಲಿ ಉಪವಾಸ ಮಾಡುತ್ತೇನೆ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನೀರಜ್‌ಗೆ ಪದಕಗಳನ್ನು ಗೆಲ್ಲಲು ನೀವು ನೀಡುವ ಆಹಾರ ಸಹಾಯ ಮಾಡಿದಂತೆ, ಈ ಚುರ್ಮಾ ಮುಂದಿನ ಒಂಬತ್ತು ದಿನಗಳವರೆಗೆ ರಾಷ್ಟ್ರದ ಸೇವೆ ಮಾಡಲು ನನಗೆ ಸಹಾಯ ಮಾಡಲಿದೆ. ಈ ಮೂಲಕ ಪ್ರಧಾನಿ ಮೋದಿ ಅವರು ನೀರಜ್ ಚೋಪ್ರಾ ತಾಯಿಗೆ ಚುರ್ಮಾ ಕಳುಹಿಸಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಿಮ್ಮ ಮನೆಯಲ್ಲಿ ತಯಾರಿಸಿದ ‘ಚುರ್ಮಾ’ (ಹರಿಯಾಣದ ಜನಪ್ರಿಯ ಸಿಹಿ ತಿಂಡಿ) ತಂದು ಕೊಡಬೇಕೆಂದು ತಿಳಿಸಿದ್ದರು. ಇದೇ ವೇಳೆ ಮುಂದಿನ ಬಾರಿ ತಂದು ಕೊಡುವುದಾಗಿ ನೀರಜ್ ಚೋಪ್ರಾ ಹೇಳಿದ್ದರು.

2020 ರಲ್ಲಿ ನಡೆದ ಈ ಮಾತುಕತೆಯನ್ನು ಇದೀಗ ಪ್ರಧಾನಿ ಮೋದಿ ಪ್ಯಾರಿಸ್ ಒಲಿಂಪಿಕ್ಸ್​ಗೂ ಮುನ್ನ ನೆನಪಿಸಿದ್ದರು. ಈ ವೇಳೆ ಈ ಸಲ ಖಂಡಿತವಾಗಿಯೂ ತಂದು ಕೊಡುತ್ತೇನೆ ಎಂದು ನೀರಜ್ ಚೋಪ್ರಾ ಮಾತು ನೀಡಿದ್ದರು. ಈ ಸಲ ಪದಕ ಗೆದ್ದು, ನಿಮ್ಮ ಮನೆಯಲ್ಲಿ ತಾಯಿ ತಯಾರಿಸಿದ ಚುರ್ಮಾ ತಂದುಕೊಡಬೇಕೆಂದು ಪ್ರಧಾನಿ ಮೋದಿ ತಿಳಿಸಿದ್ದರು.

ಅದರಂತೆ ಇದೀಗ ನೀರಜ್ ಚೋಪ್ರಾ ಅವರು ತಾಯಿಯ ಕೈಯಿಂದ ತಯಾರಾದ ದೇಸಿ ಚುರ್ಮಾ ಸಿಹಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ. ಇದನ್ನು ಸೇವಿಸಿದ ಪ್ರಧಾನಿ ವಿಶೇಷ ಪತ್ರದ ಮೂಲಕ ಚೋಪ್ರಾ ಅವರ ತಾಯಿ ಸರೋಜ್ ದೇವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!