ಅಸಹ್ಯ ಪದ ಬಳಕೆ ಮಾಡಿದ್ರು, ಅದನ್ನು ನನ್ನ ಬಾಯಿಂದ ಮತ್ತೆ ಹೇಳೋಕೂ ಆಗಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿ.ಟಿ ರವಿ ಅಸಹ್ಯ ಪದ ಬಳಕೆ ಮಾಡಿದ್ರು, ಅದನ್ನು ನನ್ನ ಬಾಯಿಂದ ಮತ್ತೆ ಹೇಳೋಕೂ ಆಗಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಕಣ್ಣೀರಿಟ್ಟಿದ್ದಾರೆ.

ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದಾರೆ ಎಂದು ನಾವು ಧರಣಿ ಮಾಡುವಾಗ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯವರಿಗೆ ಡ್ರಗ್ ಅಡಿಕ್ಟ್​.. ಡ್ರಗ್ ಅಡಿಕ್ಟ್​ ಎಂದು ಸಿ.ಟಿ ರವಿ ಹೇಳುತ್ತಿದ್ದರು. ಡ್ರಗ್ ಅಡಿಕ್ಟ್ ಯಾಕೆ ಅಂತೀರಾ, ನೀವು ಕೂಡ ಆಕ್ಸಿಡೆಂಟ್ ಮಾಡಿದ್ದರಲ್ಲಾ, ತಾವು ಕೂಡ ಜೀವ ತೆಗೆದವರು ಆಗುತ್ತೀರಾ ಅಲ್ಲ ಅಂದೆ.

ನಾನು ಹೀಗೆ ಅಂದಿದ್ದಕ್ಕೆ ತಿರುಗಿ ಅಸಹ್ಯ ಪದ ಪಳಸಿದರು. ಅದನ್ನು ನಾನು ಬಳಸಲಿಕ್ಕೆ ಅಸಹ್ಯವಾಗುತ್ತಿದೆ. ನಾಗರೀಕ ಸಮಾಜದಲ್ಲಿ, ರಾಜಕೀಯದಲ್ಲಿ ಬಹಳಷ್ಟು ಧೈರ್ಯ ಮಾಡಿ ಇಲ್ಲಿವರೆಗೆ ಬಂದಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.ಎಲ್ಲ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ಸಿ.ಟಿ ರವಿ ಆ ಮಾತನ್ನು ಹತ್ತು ಬಾರಿ ಹೇಳಿ ತೇಜೋವಧೆ ಮಾಡಿದರು. ಇದಕ್ಕೆಲ್ಲಾ ಎದರುವುದಿಲ್ಲ. ಒಬ್ಬ ತಾಯಿ, ಅಕ್ಕ, ಅತ್ತೆಯಾಗಿದ್ದೇನೆ. ಇವತ್ತು ನನ್ನ ನೋಡಿ, ಸಾವಿರಾರು ಮಹಿಳೆಯರು ರಾಜಕೀಯಕ್ಕೆ ಬರಬೇಕು ಎಂದು ಇದ್ದಾರೆ. ಸದನದಲ್ಲಿ ಈ ರೀತಿ ಮಾತನಾಡಿದರೆ ಬಹಳ ಹರ್ಟ್​ ಆಗುತ್ತದೆ ಎಂದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!