ಮೇಷ
ತುಸು ಕ್ಲಿಷ್ಟಕರ ದಿನ. ವೃತ್ತಿ ಒತ್ತಡ ದೈಹಿಕ ಸುಸ್ತಿಗೂ ಕಾರಣ ವಾದೀತು. ಕೆಲ ವಿಷಯ ಮಾನಸಿಕ ಗೊಂದಲ ಸೃಷ್ಟಿಸುವುದು.
ವೃಷಭ
ನಿಮ್ಮ ಕಾರ್ಯ ಸಾಽಸಲ್ಪಡಲಿದೆ. ಆದರೆ ವಿಳಂಬವಾಗಿ. ಸಂಬಂಧದಲ್ಲಿ ಒಡಕು. ತೈಲಖಾದ್ಯ ಆರೋಗ್ಯ ಕೆಡಿಸಬಹುದು.
ಮಿಥುನ
ವೃತ್ತಿಯಲ್ಲಿ ತೊಡಕು. ಹೆಚ್ಚಿನ ಅವಕಾಶ ಸಿಗದು. ಮೇಲಽಕಾರಿ ಜತೆ ಉದ್ವಿಗ್ನತೆ. ವಾದ ಮಾಡಲು ಹೋಗಬೇಡಿ. ಸಹನೆ ಕಾಯ್ದುಕೊಳ್ಳಿ.
ಕಟಕ
ಧೈರ್ಯಗೆಡಬೇಡಿ. ಎಂತಹ ಪ್ರತಿಕೂಲ ಪರಿಸ್ಥಿತಿ ಎದುರಾದರೂ ದೇವರ ಕೃಪೆ ನಿಮಗಿದೆ. ಶಾಂತಿ, ಸಹನೆ ಕಾಯ್ದುಕೊಳ್ಳಿ. ಎಲ್ಲ ಸರಿಯಾಗಲಿದೆ.
ಸಿಂಹ
ಕಾರ್ಯಶೈಲಿಯಲ್ಲಿ ಬದಲಾವಣೆ ಸಂಭವ. ನಿರೀಕ್ಷೆಗಿಂತ ಹೆಚ್ಚು ಕೆಲಸದ ಒತ್ತಡ. ಸಂಜೆ ವೇಳೆಗೆ ಎಲ್ಲ ಸುಸೂತ್ರ. ಮೆಚ್ಚುಗೆ ಪಡೆಯುವಿರಿ.
ಕನ್ಯಾ
ವೃತ್ತಿ ಕಾರ್ಯದಲ್ಲಿ ಪೂರ್ಣ ಮಗ್ನರು. ಇತರ ವಿಷಯಕ್ಕೆ ಗಮನ ಹರಿಯದು. ಕುಟುಂಬದ ಸಮಸ್ಯೆಗೂ ಗಮನ ಕೊಡಿ. ಆರ್ಥಿಕ ಒತ್ತಡ.
ತುಲಾ
ವೃತ್ತಿಯಲ್ಲಿ ಏರಿಳಿತ ಎದುರಿಸುವಿರಿ. ಲಕ್ಷ್ಯ ಕಡಿಮೆ ಮಾಡದಿರಿ. ಧಾರ್ಮಿಕ ಕ್ಷೇತ್ರ ಭೇಟಿ ನಿರಾಳತೆ ತರುವುದು. ಆರ್ಥಿಕ ಹಿನ್ನಡೆ.
ವೃಶ್ಚಿಕ
ಕಠಿಣ ದಿನ. ಹೆಚ್ಚು ಹೊಣೆಗಾರಿಕೆ. ಉತ್ಸಾಹ ತರುವ ಇತರ ಕಾರ್ಯದಲ್ಲಿ ತೊಡಗಿ. ಆರ್ಥಿಕ ಪ್ರಗತಿ ನಿರೀಕ್ಷಿಸಿದಷ್ಟು ಆಗದು.
ಧನು
ಹೆಚ್ಚು ಪರಿಶ್ರಮ ಪಟ್ಟು ನಿಮ್ಮ ಸಾಮರ್ಥ್ಯ ತೋರ್ಪಡಿಸಿ. ಟೀಕೆಗಳಿಗೆ ಉತ್ತರ ಕೊಡಿ. ಕೆಲವರಿಗೆ ಕಾಲು, ಸೊಂಟ ನೋವು ಕಾಡಬಹುದು.
ಮಕರ
ಉತ್ಸಾಹಪೂರ್ಣ ದಿನ. ಕಾರ್ಯ ಸಫಲತೆ. ಸಂಗಾತಿ ಜತೆಗಿನ ಭಿನ್ನಮತ ಬಗೆಹರಿಸಿ. ಖರ್ಚು ಕಡಿಮೆ ಮಾಡಲು ಯೋಜನೆ ಹಾಕಿ.
ಕುಂಭ
ವೃತ್ತಿ ಮತ್ತು ಮನೆಯಲ್ಲಿ ಕಠಿಣ ದಿನ. ಸುಗಮವಾಗಿ ಸಾಗದು. ಅನಿರೀಕ್ಷಿತ ಪಯಣ. ಕ್ಲಪ್ತ ಕಾಲದಲ್ಲಿ ಆಹಾರ ಸೇವಿಸಿ. ಆರೋಗ್ಯ ಕಾಯ್ದುಕೊಳ್ಳಿ.
ಮೀನ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಒತ್ತಡಕ್ಕೆ ಸಿಲುಕುವಿರಿ. ಸಣ್ಣಪುಟ್ಟ ಚಿಂತೆ ಸದಾ ಕಾಡುತ್ತಿರುತ್ತದೆ. ಆಂಜನೇಯನ ಭಜಿಸಿ.



