ದಿನಭವಿಷ್ಯ: ದೈಹಿಕ ಸಮಸ್ಯೆ ಎದುರಿಸುವಿರಿ, ಅದಕ್ಕೆ ನಿಮ್ಮ ಭಾವನೆಗಳೇ ಕಾರಣ!

ಮೇಷ
ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯು ವಿರಿ. ಸಣ್ಣಪುಟ್ಟ ಭಿನ್ನಮತ ಉಂಟಾದರೂ ನೆಮ್ಮದಿಯ ದಿನ. ಆರ್ಥಿಕ ಅಡಚಣೆ ಬಾಧಿಸದು.

ವೃಷಭ
ಮನಸ್ಸಿಗೆ ನೆಮ್ಮದಿ ತರುವಂತಹ ಬೆಳವಣಿಗೆ. ಕೆಲದಿನಗಳಿಂದ ಕಾಡುತ್ತಿದ್ದ ಚಿಂತೆ ನಿವಾರಣೆ. ವೈಮನಸ್ಸು ಪರಿಹಾರ.

ಮಿಥುನ
ನ್ಯಾಯವಾದುದಕ್ಕೆ ನಿಮ್ಮ ಬೆಂಬಲ ನೀಡಲು ಹಿಂಜರಿಕೆ ಬೇಡ. ಇದಕ್ಕಾಗಿ ಕೆಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಆ ಬಗ್ಗೆ ಚಿಂತಿಸದಿರಿ.

ಕಟಕ
ಇಂದು ನೀವು ತಾಳ್ಮೆ ವಹಿಸಿದರೆ ಕಠಿಣ ಕೆಲಸ ಪೂರೈಸಬಲ್ಲಿರಿ. ಇತರರ ಪ್ರಭಾವಕ್ಕೆ ಸಿಲುಕದೆ ನಿಮ್ಮದೇ ನಿರ್ಧಾರ ತಾಳಿ. ಅರ್ಧಕ್ಕೆ ಕೆಲಸ ಕೈಬಿಡಬೇಡಿ.

ಸಿಂಹ
ನಿಮ್ಮ ವ್ಯವಹಾರದಲ್ಲಿ ಹಠಾತ್ ತಿರುವು ಸಂಭವಿಸಬಹುದು. ಆರ್ಥಿಕ ಪರಿಸ್ಥಿತಿ ನಿಮಗೆ ಅನುಕೂಲಕರ ಆಗುವುದು. ಬಂಧುಗಳ ಸಹಕಾರ.

ಕನ್ಯಾ
ಆತ್ಮಸಂತೃಪ್ತಿ ಮತ್ತು ಜನಪ್ರಿಯತೆ ಎರಡೂ ಇಂದು ನಿಮ್ಮ ಜತೆಗಿರುವುದು. ಕೆಲಸದಲ್ಲಿ  ನೀವು ಬಯಸಿದ ಸಾಧನೆ. ಎಲ್ಲರಿಂದ ಮೆಚ್ಚುಗೆ.

ತುಲಾ
ಇಂದು ಧನಾರ್ಜನೆಯ ದಿನ. ವ್ಯವಹಾರದಲ್ಲಿ ಲಾಭ. ಖರ್ಚು ಮಾಡಲು ಯಾವುದೇ ಅಡ್ಡಿ ಇಲ್ಲ. ಕುಟುಂಬ ದಲ್ಲಿ ಸಂತೋಷದ ಮನಸ್ಥಿತಿ.

ವೃಶ್ಚಿಕ
ಯಾವುದೋ ವಿಷಯ ನಿಮ್ಮಲ್ಲಿ ಜಿಜ್ಞಾಸೆಗೆ ಕಾರಣವಾಗುವುದು. ಯಾವ ದಾರಿ ಹಿಡಿಯಬೇಕೆಂದು ಅರಿಯದೆ ಗೊಂದಲ. ಮನಸ್ಸಿಗೆ ಕಿರಿಕಿರಿ.

ಧನು
ತಕ್ಷಣದ ನಿರ್ಧಾರ ತಾಳಲು ನಿಮ್ಮ ಮನಸ್ಸನ್ನು ಸಿದ್ಧ ಪಡಿಸಬೇಕು. ಏಕೆಂದರೆ ಅಂತಹ ಪ್ರಸಂಗ ಇಂದು ನಿಮ್ಮ ಪಾಲಿಗೆ ಒದಗಿ ಬರಬಹುದು.

ಮಕರ
ದೈಹಿಕ ಸಮಸ್ಯೆ ಎದುರಿಸುವಿರಿ. ಅದಕ್ಕೆ ನಿಮ್ಮ  ಭಾವನೆಗಳೇ ಕಾರಣವಾಗಿರ ಬಹುದು. ಇಂದು ಮನಸ್ಸು ಗೊಂದಲದ ಗೂಡಾಗಿರುವುದು.

ಕುಂಭ
ಮನೆಯಲ್ಲಿ ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಮಸ್ಯೆ ಎದುರಿಸುವಿರಿ. ಇದರಿಂದ ಇತರರ ಟೀಕೆಗೆ ಗುರಿಯಾಗುವಿರಿ.

ಮೀನ
ನಿಮ್ಮ ತಾಳ್ಮೆ ಕೆಡುವಂತಹ ಪ್ರಸಂಗ. ಮುಖ್ಯವಾಗಿ ಸಂಬಂಧದ ವಿಚಾರದಲ್ಲಿ  ಪ್ರತಿಕೂಲ ಬೆಳವಣಿಗೆ. ಜಗಳ ದಿಂದ ದೂರವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!