ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಯೋಸಿಟಿಸ್‌ನಿಂತ ಸಮಂತಾ ಬಳಲುತ್ತಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಸಮಂತಾ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಸೆಲೆಬ್ರಿಟಿಗಳು ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಹೇಳಿದ್ದಾರೆ. ಚಿರಂಜೀವಿ ಸಹ ಟ್ವೀಟ್ ಮಾಡಿದ್ದು, ಸಮಂತಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಡಿಯರ್ ಸ್ಯಾಮ್, ಸಮಯ ಬದಲಾದಂತೆ ಹೊಸ ಚಾಲೆಂಜ್‌ಗಳು ನಮ್ಮ ಮುಂದೆ ಬರುತ್ತದೆ. ಇದರಿಂದ ನಮ್ಮ ಆಂತರಿಕ ಶಕ್ತಿ ಹೆಚ್ಚಾಗುತ್ತದೆ. ನೀನು ಒಳ್ಳೆಯ ಹುಡುಗಿ ನಿನ್ನಲ್ಲಿ ಬಹಳ ಶಕ್ತಿ ಇದೆ, ಈ ಸಮಸ್ಯೆಯನ್ನು ಎದುರಿಸಿ ಹೊರಬರುತ್ತೀಯ ಎನ್ನುವ ನಂಬಿಕೆ ಇದೆ, ಅದು ಆದಷ್ಟು ಬೇಗ. ಶೀಘ್ರ ಗುಣಮುಖರಾಗಿ ಎಂದಿದ್ದಾರೆ. ಇದಕ್ಕೆ ಸಮಂತಾ ಕೂಡ ನಿಮ್ಮ ಮಾತಿಗೆ ಖುಷಿಯಾಗಿದೆ, ಆದಷ್ಟು ಬೇಗ ಹುಷಾರಾಗಿ ಬರುತ್ತೇನೆ ಎಂದಿದ್ದಾರೆ.
Wishing you speedy recovery!!@Samanthaprabhu2 pic.twitter.com/ZWGUv767VD
— Chiranjeevi Konidela (@KChiruTweets) October 30, 2022