ಹೊಸದಿಗಂತ ವರದಿ, ಧಾರವಾಡ:
ಸಣ್ಣಸೋಮಾಪುರ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಜಾಕೀಯಾ ಮುಲ್ಲಾಳನ್ನು (೧೯) ಆಕೆ ಪ್ರಿಯಕರ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ನಗರದ ನಿವಾಸಿ ಸಾಬೀರ್ ಮುಲ್ಲಾ (೨೦) ಕೊಲೆ ಮಾಡಿದ ಹಂತಕ.
ಪ್ಯಾರಾ ಮೆಡಿಕಲ್ ಓದುತಿದ್ದ ಸಾಬೀರ ಮುಲ್ಲಾ ಮತ್ತು ಜಾಕೀಯಾ ಮುಲ್ಲಾ ಇಬ್ಬರು ಪ್ರೀತಿಸುತ್ತಿದ್ದರು. ಮದುವೆಯ ನಿಶ್ಚಿಯವಾಗಿತ್ತು. ಆದರೆ, ಸಾಬೀರ ಮುಲ್ಲಾ ಅನೇಕ ಹುಡಗಿಯರ ಜೊತೆ ಸಂಬಂಧ ಹೊಂದಿದ ಕುರಿತು ಜಾಕೀಯಾ ತಿಳಿದ ನಂತರವೇ ಮದುವೆ ನಿರಾಕರಿಸಿದ್ದಳು.
ಕುಪಿತಗೊಂಡ ಸಾಬೀರ, ಮಂಗಳವಾರ ಮಾತನಾಡಬೇಕು ಹೊರಗಡೆ ಬರುವಂತೆ ಜಾಕೀಯಾಳನ್ನು ಕೋರಿದ್ದು, ಹೊರಬಂದ ಜಾಕೀಯಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೋಯ್ದು, ಆಕೆ ದುಪಟ್ಟದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದು, ಬುಧವಾರ ಮೃತದೇಹ ಪತ್ತೆಯಾಗಿತ್ತು.


