October 15, 2026
Thursday, October 15, 2026
spot_img

ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿಯ ಹ*ತ್ಯೆ: ಇಬ್ಬರು ಅಂದರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದ ಘಟನೆ ದುರ್ಘಟನೆಯಲ್ಲಿ ಅಂತ್ಯಗೊಂಡಿದ್ದು, ಮೂರು ದಿನಗಳ ಚಿಕಿತ್ಸೆ ಬಳಿಕ ಕಾನೂನು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿ ವಿವಾದವೇ ಕಾರಣ

ಮೂರು ವರ್ಷಗಳ ಹಿಂದೆ ಪರಿಚಯವಾದ ಇಬ್ಬರ ನಡುವೆ ಪ್ರೀತಿಯಿತ್ತು. ಬಳಿಕ ಯುವಕ ತನ್ನ ಹಿಂದಿನ ವಿವಾಹ ಹಾಗೂ ವಿಚ್ಛೇದನದ ವಿಚಾರವನ್ನು ಮುಚ್ಚಿಟ್ಟಿರುವುದು ಗೊತ್ತಾದ ನಂತರ ಯುವತಿ ಸಂಬಂಧ ಕಡಿದುಕೊಂಡಿದ್ದಳು. ಇದರಿಂದ ಉಂಟಾದ ವೈಷಮ್ಯವೇ ದಾಳಿಗೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:

ಇಬ್ಬರು ಆರೋಪಿಗಳು ಬಂಧನ

ಜುಲೈ 13ರಂದು ಯುವತಿಯ ಮನೆ ಸಮೀಪ ನಡೆದ ಚಾಕು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಜೀವನ್ ಭೀಮಾನಗರ ಪೊಲೀಸರು ಯುವಕ ಹಾಗೂ ಆತನ ಸಹೋದರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Must Read