ನಿನ್ನ ಡ್ರೋನ್‌ ಡೋಂಗಿ..ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಕಾಲೆಳೆದ ಸ್ಪರ್ಧಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಶೋ ಅಂದ್ಮೇಲೆ ಅಲ್ಲಿಜಗಳಗಳು, ಕಾಲೆಳೆಯುವಿಕೆ, ಗುಂಪುಗಾರಿಕೆ ಮುಂತಾದವುಗಳು ಸಾಮಾನ್ಯ.

ಅದೇ ರೀತಿ ಇದೀಗ ಕನ್ನಡ ಬಿಗ್ ಬಾಸ್ ಶುರುವಾಗಿದ್ದು, ಡ್ರೋನ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರಿ ಟ್ರೋಲ್‌ಗೆ ಗುರಿಯಾಗಿದ್ದ ಡ್ರೋನ್‌ ಪ್ರತಾಪ್‌ ದೊಡ್ಮನೆಗೆ (BBK Season 10) ಎಂಟ್ರಿ ಕೊಟ್ಟಿದ್ದಾಗಿದೆ. ತಾನು ಏನು ಎಂಬುದನ್ನು ತಿಳಿಸುವ ಉದ್ದೇಶದಿಂದಲೇ ಶೋ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಆದ್ರೆ ಇದೀಗ ನಾಲ್ಕನೇ ದಿನಕ್ಕೆ ಡ್ರೋನ್‌ ಪ್ರತಾಪ್‌ ಕಾಲೆಳೆಯುವಿಕೆ ಶುರುವಾಗಿದೆ. ಮನೆಯ ಕೆಲವು ಸದಸ್ಯರು ಡ್ರೋನ್‌ ಪ್ರತಾಪ್‌ ಅವರಿಗೆ ಕೆಲವು ಪ್ರಶ್ನೆಯನ್ನು ಇಟ್ಟಿದ್ದಾರೆ.

ಬಿಗ್‌ ಬಾಸ್‌ ಹಂಚಿಕೊಂಡ ಪ್ರೋಮೊದಲ್ಲಿ ಸಂತೋಷ್‌ ಅವರು ʻʻಪ್ರತಾಪ್‌ ಮಾಡಿರುವ ಡ್ರೋನ್‌ ನೋಡಿದ್ದೀರಾ?ʼʼಎಂದು ಪ್ರಶ್ನೆ ಇಟ್ಟಿದ್ದಾರೆ. ಇದಾದ ಕೂಡಲೇ ತುಕಾಲಿ ಸಂತೋಷ್‌ ʻʻಎಷ್ಟು ದಪ್ಪ ಇರುತ್ತೆ ಅದು?ಡ್ರೋನ್‌ ಆಗುತ್ತಾ?ವಿಮಾನ ಆಗುತ್ತಾ? ಅಂಗಡಿಯಿಂದ ತೆಗೊಂಡು ಹೋಗಿ ಹಾರಿಸುತ್ತಾ ಇದ್ದಾರೆ. ಡ್ರೋನ್‌ ತೆಗೆದುಕೊಂಡು ಹೋಗಿ ಯಾರಿಗೆಲ್ಲ ಔಷಧಿ ಬೇಕು 600 ರೂ. ಕೊಟ್ಟು ಔಷಧಿ ಹೊಡಿಸುತ್ತಾರೆʼʼಎಂದರು.

ಈ ವೇಳೆ ಇನ್ನೊಬ್ಬ ಸಂತೋಷ್‌ ಬಿದ್ದು ಬಿದ್ದು ನಕ್ಕಿದ್ದಾರೆ. ಆಗ ಡ್ರೋನ್‌ ಪ್ರತಾಪ್‌ ಕಿಚನ್‌ ರೂಮ್‌ನಲ್ಲಿ ಇವೆಲ್ಲವನ್ನೂ ನಮ್ಮ ಆಫೀಸ್‌ನಲ್ಲಿ ಮಾತನಾಡೋಣ. ಆಫೀಸ್‌ಗೆ ಬನ್ನಿʼಎಂದಿದ್ದಾರೆ. ಈ ವೇಳೆ ಸಂತೋಷ್‌ ಹಾಗೂ ಪ್ರತಾಪ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ನೇಹಿತ್‌ ಮುಂದಾಗಿ ಸಂತೋಷ್‌ ಅವರು ತುಂಬ ನಿಧಾನವಾಗಿ ಹೇಳಿದ್ದು. ನಂಗೊಂದಿಷ್ಟು ಜನ ರೈತರು ಗೊತ್ತಿದ್ದಾರೆ. ನಿನ್ನ ಡ್ರೋನ್‌ ಡೋಂಗಿಎಂದರು. ಅದಕ್ಕೆ ಡ್ರೋನ್‌ ಪ್ರತಾಪ್‌ ʻಯಾರು ಡೋಂಗಿ ಮಾಡ್ತಾ ಇರೋದುʼʼ?ಎಂದಾಗ ಸ್ನೇಹಿತ್‌ ಅವರು ʻʻನೀವೆ ಡೋಂಗಿ ಮಾಡ್ತಾ ಇರೋದುʼʼಎಂದು ಡ್ರೋನ್‌ ಪ್ರತಾಪ್‌ಗೆ ಎದುರು ವಾದಿಸಿದ್ದಾರೆ.

ಆದ್ರೆ ಪ್ರತಾಪ್ ಪರವಾಗಿ ನಿಲ್ಲುವ ಒಬ್ಬರೇ ಒಬ್ಬರು ಬಿಗ್ ಬಾಸ್ ಮನೆಯಲ್ಲಿ ಕಾಣಿಸುತ್ತಿಲ್ಲ. ಗುಂಪುಗುಂಪಾಗಿ ಬಂದು ಡ್ರೋನ್ ಪ್ರತಾಪ್‌ನನ್ನು ರೇಗಿಸಿ ಗೋಳುಹುಯ್ದುಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ . ನೋಡೋಣ, ಮುಂದೇನಾಗಲಿದೆ ಎಂದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!