ತಲ್ವಾರ್ ​ನಿಂದ ಬರ್ತಡೇ ಕೇಕ್ ಕತ್ತರಿಸಿದ ಯುವಕ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವಕನೊಬ್ಬ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ತಲ್ವಾರ್ ನಿಂದ ಕತ್ತರಿಸುತ್ತಿದ್ದ ಘಟನೆ ವಿಜಯಪುರದ ಪೇಟಿ ಬಾವಡಿಯಲ್ಲಿ ನಡೆದಿದೆ.

ಅಮನ್ ಲೋನಿ ತಲ್ವಾರ್ ಕೇಕ್ ಕಟ್ ಮಾಡಿದ ಯುವಕ. ಅಮನ್ ಲೋಣಿಗೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾನೆ.

ಸದ್ಯ ಈ ಘಟನೆ ಚರ್ಚೆಯಲ್ಲಿದ್ದು. ಸದ್ಯ ಗೋಲಗುಂಬಜ್ ಪೊಲೀಸರು ಅಮನ್ ಲೋಣಿ ಹಾಗೂ ರೌಡಿ ಶೀಟರ್ ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಮುಚ್ಚಳಿಕೆ ಪತ್ರ ಬರೆದು ಕಳುಹಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!