ಮೊದಲು ಪ್ಯಾನ್‌ಗೆ ಚಕ್ಕೆ, ಲವಂಗ, ಮರಾಠ ಮೊಗ್ಗು, ಸೋಂಪು ಕಾಳು, ಏಲಕ್ಕಿ, ಜೀರಿಗೆ, ಕಾಳುಮೆಣಸು, ಒಣಮೆಣಸು, ಕೊತ್ತಂಬರಿ ಕಾಳು ಹಾಕಿ ಬಿಸಿ ಮಾಡಿ ನಂತರ ಮಿಕ್ಸಿಗೆ ಹಾಕಿ, ಇದರ ಜೊತೆಗೆ ಕೊತ್ತಂಬರಿ, ಪುದೀನ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ರುಬ್ಬಿ ಇಟ್ಟುಕೊಳ್ಳಿ.
ನಂತರ ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ ಈರುಳ್ಳಿ ಕರಿಬೇವು ಹಾಕಿ. ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಅರಿಶಿಣ ಪುಡಿ ಹಾಕಿ ಬಾಡಿಸಿ.
ನಂತರ ಬಟಾಣಿ, ಆಲೂಗಡ್ಡೆ, ಮೆಂತ್ಯೆಸೊಪ್ಪು ಹಾಗೂ ಕ್ಯಾಪ್ಸಿಕಂ ಹಾಕಿ ಉಪ್ಪು ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ. ನಂತರ ರುಬ್ಬಿದ ಮಿಶ್ರಣ ಹಾಕಿ.
ನಂತರ ಇದಕ್ಕೆ ಅಕ್ಕಿ ಹಾಕಿ, ನೀರು ಹಾಕಿ, ನಿಂಬೆಹುಳಿ ಹಿಂಡಿ ಎರಡು ವಿಶಲ್ ಹೊಡೆಸಿದ್ರೆ ಡಿಫ್ರೆಂಟ್ ಮೆಂತ್ಯೆಬಾತ್ ರೆಡಿ