ದಿಗಂತ ವರದಿ ವಿಜಯನಗರ:
ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಸಂಬoಧಿಕರು ಮಂಗಳವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಮರಿಯಮ್ಮನಹಳ್ಳಿಯ ೧೧ ನೇ ವಾರ್ಡಿನ ನಿವಾಸಿ ನಾಲಬಂದಿ ಸಲೀಂ(೨೮)ಮೃತ ದುರ್ದೈವಿ.
ಬೆಳಗ್ಗೆ ೮ ಗಂಟೆ ಸುಮಾರಿಗೆ ಸಲೀಂ ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಇದರಿಂದ ಆತಂಕಗೊoಡ ಕುಟುಂಬಸ್ಥರು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮಯಕ್ಕೆ ವೈದ್ಯರು ಇಲ್ಲದ ಕಾರಣ ಹೊಸಪೇಟೆಯ ೧೦೦ ಬೆಡ್ ಆಸ್ಪತ್ರಗೆ ಸಾಗಿಸುತ್ತಿದ್ದಾಗ ಸಲೀಂ ಆ್ಯಂಬುಲೆನ್ಸ್ ನಲ್ಲಿ ಪ್ರಾಣ ಬಿಟ್ಟಿದ್ದಾನೆ.
ಇದರಿಂದ ಆಕ್ರೋಶಗೊಂಡ ಮೃತನ ಸಂಬoಧಿಕರು ಹಾಗೂ ಸ್ಥಳೀಯರು ಮರಿಯಮ್ಮನಹಳ್ಳಿ ಪಟ್ಟಣದ ಆರೋಗ್ಯ ಕೇಂದ್ರದ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿದರು.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಶಂಕರ್ ನಾಯ್ಕ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಸಮರ್ಪಕವಾಗಿ ವೈದ್ಯರು ಇಲ್ಲದಿರುವುದರಿಂದ ಈ ಅವಘಡ ಸಂಬoಧಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಸಕಾಲಕ್ಕೆ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ಇನ್ನಿಬ್ಬರು ವೈದ್ಯರನ್ನು ನೇಮಿಸುವುದಾಗಿ ಭರವಸೆ ನೀಡಿ, ಪ್ರತಿಭಟನೆ ಶಮನಗೊಳಿಸಿದರು.