ಯುವಕರ ವ್ಹೀಲಿಂಗ್ ಹುಚ್ಚಾಟ: ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವಕರಲ್ಲಿ ವ್ಹೀಲಿಂಗ್ ಉತ್ಸಾಹ ಹೆಚ್ಚುತ್ತಿದೆ. ಅಪಾಯದ ಅರಿವಿದ್ದರೂ ಯುವಕರು ವ್ಹೀಲಿಂಗ್ ಮಾಡುವುದನ್ನ ನಿಲ್ಲಿಸುವುದಿಲ್ಲ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಂಚಾರ ಪೊಲೀಸರು ಎರಡು ವಾರಗಳಿಂದ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಗಳೂರು ಮುಖ್ಯ ಆಯುಕ್ತ ಬಿ.ದಯಾನಂದ್ ಅವರು ವ್ಹೀಲಿಂಗ್ ಕಂಟ್ರೋಲ್ ತಪಾಸಣೆ ನಡೆಸುವಂತೆ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳಿಗೆ
ಸ್ಪೆಷಲ್ ಡ್ರೈವ್ ನಡೆಸುವಂತೆ ಸೂಚಿಸಿದ್ದಾರೆ.

ಸದ್ಯ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಹೀಲಿಂಗ್ ವಿಡಿಯೋ ಅಪ್ಲೋಡ್ ಮಾಡುವ ಯುವಕರ ಬೆನ್ನು ಬಿದ್ದಿದ್ದಾರೆ. ನಗರದ ಎಲ್ಲಾ ಭಾಗಗಳಲ್ಲಿ ವ್ಹೀಲಿಂಗ್ ಮಾಡುವರಿಗೆ ತಮ್ಮ ಪೋಷಕರ ಸಮ್ಮುಖದಲ್ಲಿ ಬಾಂಡ್ ಬರೆಸಿಕೊಂಡು ಸಹಿ ಹಾಕುವ ಮೂಲಕ ಎಚ್ಚರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!