ಬಾಂಗ್ಲಾ ಗಲಭೆಯ ಹಿಂದಿನ ಮಾಸ್ಟರ್‌ಮೈಂಡ್ ಯೂನಸ್: ಶೇಖಾ ಹಸೀನಾ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮಧ್ಯಂತರ ಆಡಳಿತ ಸರ್ಕಾರದ ವಿರುದ ವಾಗ್ದಾಳಿ ನಡೆಸಿದ್ದಾರೆ.

ಬಾಂಗ್ಲಾದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ದೇಶದಲ್ಲಿ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಗೆ ಸಹಾಯವಾಗುವಂತೆ ಫ್ಯಾಸಿಸ್ಟ್ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಲಂಡನ್‌ನಲ್ಲಿ ಸಾಗರೋತ್ತರ ಅವಾಮಿ ಲೀಗ್ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಹಸೀನಾ ಅವರು, ಬಾಂಗ್ಲಾದಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಡೆದ ಪ್ರಕ್ಷುಬ್ಧತೆಯ ಹಿಂದಿನ ಮಾಸ್ಟರ್‌ಮೈಂಡ್ ಯೂನಸ್ ಎಂದು ಆರೋಪಿಸಿ, ಬಾಂಗ್ಲಾದೇಶದ ಕಾನೂನಿನ ಕುಣಿಕೆಯಲ್ಲಿ ಯೂನಸ್​ ಮತ್ತು ಅವರ ಮಿತ್ರರನ್ನು ಸಿಲುಕಿಸುವುದಾಗಿ ಪ್ರತಿಜ್ಞೆ ಮಾಡಿದರು.

ದೇಶದಲ್ಲಿ ಆಗಸ್ಟ್ 5 ರಿಂದ, ಅಲ್ಪಸಂಖ್ಯಾತರು, ಹಿಂದುಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರ ಪೂಜಾ ಸ್ಥಳಗಳ ಮೇಲೆ ವ್ಯಾಪಕವಾಗಿ ದಾಳಿಗಳು ನೆಡೆಯುತ್ತಿವೆ. ಆ ದಾಳಿಗಳನ್ನು ಪಕ್ಷವು ಖಂಡಿಸುತ್ತೇದೆ ಹಾಗೂ ಯೂನಸ್​ ನೇತೃತ್ವದ ಹೊಸ ಸರ್ಕಾರದಲ್ಲಿ ಜಮಾತ್ ಸಂಘಟನೆಯ ಭಯೋತ್ಪಾದಕರು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಾಂಗ್ಲಾದೇಶವು ಈಗ ಫ್ಯಾಸಿಸ್ಟ್ ಆಡಳಿತದ ಹಿಡಿತದಲ್ಲಿದೆ, ಅಲ್ಲಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಳಿಸಿಹಾಕಲಾಗಿದ್ದು, ಬಡತನ ನಿರ್ಮೂಲನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಪ್ರಜಾಪ್ರಭುತ್ವದ ಬಲವರ್ಧನೆ ಸೇರಿದಂತೆ ನಮ್ಮ ಸರ್ಕಾರದ ಸಾಧನೆಗಳನ್ನು ಯೂನಸ್ ಅವರ ನಾಯಕತ್ವದಲ್ಲಿ ರದ್ದುಗೊಳಿಸಲಾಗಿದ್ದು, ಯೂನಸ್ ಅವರ ಸರ್ಕಾರವು ಭಯೋತ್ಪಾದಕರು ಮತ್ತು ಕ್ರಿಮಿನಲ್‌ಗಳಿಗೆ ಕ್ಷಮಾದಾನ ನೀಡುತ್ತಿದ್ದು, ಬೆಂಕಿ ಹಚ್ಚುವಿಕೆ ಮತ್ತು ಕೊಲೆಗಳಲ್ಲಿ ಭಾಗಿಯಾಗಿರುವವರಿಗೆ ಸಾಥ್​​ ನೀಡುತ್ತಿದ್ದಾರೆ ಎಂದು ಹಸೀನಾ ಆರೋಪಿಸಿದ್ದಾರೆ. ಬಾಂಗ್ಲಾದೇಶ ಸಂಸತ್ತಿನ ಮೇಲಿನ ದಾಳಿಗಳು ಮತ್ತು ಇತರ ದೌರ್ಜನ್ಯಗಳಿಗೆ ಕಾರಣರಾದವರು ಸೇರಿದಂತೆ ಶಿಕ್ಷೆಗೊಳಗಾದ ಅಪರಾಧಿಗಳು ಮತ್ತು ಭಯೋತ್ಪಾದಕರ ಬಿಡುಗಡೆಯು ಯೂನಸ್​​ ಸರ್ಕಾರದ ಸಹಭಾಗಿತ್ವವನ್ನು ಸಾಬೀತುಪಡಿಸುತ್ತದೆ ಎಂದು ಅವರು ಆರೋಪಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!