ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಕೇವಲ 55 ರನ್‌ಗೆ ಆಲೌಟ್ ಆಗಿದ್ದು, ಈ ಮೂಲಕ ರೋಹಿತ್ ಪಡೆ ಬರೋಬ್ಬರಿ 302 ರನ್ ಗೆಲುವು ದಾಖಲಿಸಿದೆ. ಇದು ಶ್ರೀಲಂಕಾ ವಿರುದ್ಧ ಭಾರತದ 2ನೇ ಅತೀ ದೊಡ್ಡ ಗೆಲುವಾಗಿದೆ. ಈ ಗೆಲುವಿನೊಂದಿಗೆ ಭಾರತ, 2023ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಇತ್ತ ಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ವೇಗಿ ಮೊಹಮ್ಮದ್ ಶಮಿ ಕೂಡುಗೆ ಪ್ರಮುಖವಾಗಿದೆ. ಶಮಿ ಪ್ರಮುಖ 5 ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ. ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿಯಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧಕರ ಪಟ್ಟಿಯಲ್ಲಿ ಜಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ 44 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ಲಂಕಾ ವಿರುದ್ಧ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಒಟ್ಟು 45 ವಿಕೆಟ್ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯರು
ಮೊಹಮ್ಮದ್ ಶಮಿ: 45 ವಿಕೆಟ್
ಜಹೀರ್ ಖಾನ್: 44 ವಿಕೆಟ್
ಜಾವಗಲ್ ಶ್ರೀನಾಥ್: 44 ವಿಕೆಟ್
ಜಸ್ಪ್ರೀತ್ ಬುಮ್ರಾ: 33 ವಿಕೆಟ್
ಅನಿಲ್ ಕುಂಬ್ಳೆ: 31 ವಿಕೆಟ್
ವಿಶ್ವಕಪ್ ಟೂರ್ನಿ ಒಂದು ಆವೃತ್ತಿಯಲ್ಲಿ ಗರಿಷ್ಠ 4 ಪ್ಲಸ್ ವಿಕೆಟ್ ಗೊಂಚಲು ಪಡೆದ ಸಾಧಕರ ಸಾಲಿನಲ್ಲಿ ಮೊಹಮ್ಮದ್ ಶಮಿ 3ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಟೂರ್ನಿಯ ಒಂದು ಆವೃತ್ತಿಯಲ್ಲಿ 4 ಪ್ಲಸ್ ವಿಕೆಟ್ ಸಾಧನೆ
ಶಾಹಿದ್ ಆಫ್ರಿದಿ(2011) 4 ಬಾರಿ
ಮಿಚೆಲ್ ಸ್ಟಾರ್ಕ್(2019) 4 ಬಾರಿ
ಮೊಹಮ್ಮದ್ ಶಮಿ(2019) 3 ಬಾರಿ
ಆ್ಯಡಮ್ ಜಂಪಾ(2023) 3 ಬಾರಿ
ಮೊಹಮ್ಮದ್ ಶಮಿ(2023) 3 ಬಾರಿ
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ ಮಾಡಿದ ಪಟ್ಟಿಯಲ್ಲಿ ಶಮಿ ಮೊದಲ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮೊದಲು ಜಾವಗಲ್ ಶ್ರೀನಾಥ್ ಮೊದಲ ಸ್ಥಾನ ಅಲಂಕರಿಸಿದ್ದರು.
ಏಕದಿನದಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 4 ಬಾರಿ
ಜಾವಗಲ್ ಶ್ರೀನಾಥ್ : 3 ಬಾರಿ
ಹರ್ಭಜನ್ ಸಿಂಗ್ : 3 ಬಾರಿ