ಉಕ್ರೇನ್‌ ನ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ದಾಳಿ: 17 ಜನರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ನಾಗರಿಕ ಪ್ರದೇಶಗಳು ಮತ್ತು ಆಸ್ಪತ್ರೆಗಳ ಮೇಲೆ ಯಾವುದೇ ರೀತಿ ದಾಳಿ ನಡೆಸುವುದಿಲ್ಲ ಎಂಬ ಹೇಳಿಕೆಗಳ ನಡುವೆಯೇ, ಮರಿಯುಪೋಲ್‌ ನ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ಏರ್‌ ಸ್ಟ್ರೈಕ್‌ ನಡೆಸಿದೆ.
ಇದರ ಪರಿಣಾಮ ಒಂದು ಮಗು ಸೇರಿ ಮೂವರು ಬಲಿಯಾಗಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ದಾಳಿಯಿಂದ ಆಸ್ಪತ್ರೆ ಸಂಪೂರ್ಣ ಧ್ವಂಸಗೊಂಡಿದ್ದು, ಕಿಟಕಿಗಳು ಸೇರಿದಂತೆ ಎಲ್ಲಾ ವಸ್ತುಗಳು ನಾಶವಾಗಿವೆ. ಆಸ್ಪತ್ರೆಯಲ್ಲಿದ್ದ ಮಕ್ಕಳು, ತುಂಬು ಗರ್ಭಿಣಿಯರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದರು. ದಾಳಿ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಯೋಧರು, ಪೊಲೀಸರು ಗಾಯಗೊಂಡವರನ್ನು ರಕ್ಷಿಸಿ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು.
ಇದನ್ನು ಹೊರತುಪಡಿಸಿ ರಾಜಧಾನಿಯ ಪಶ್ಚಿಮ ಭಾಗದ ನಗರದಲ್ಲಿರುವ 2 ಆಸ್ಪತ್ರೆಗಳ ಮೇಲೂ ಬಾಂಬ್‌ ದಾಳಿ ನಡೆದಿದೆ.
ಈಗಾಗಲೇ ರಷ್ಯಾ ಉಕ್ರೇನ್‌ ನ 18 ವೈದ್ಯಕೀಯ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ರಷ್ಯಾ ಸೇನೆಯ ನೇರ ದಾಳಿ ಎಂದು ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!