ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 71 ರನ್ ಗೆಲುವು ದಾಖಲಿಸಿದೆ.
ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ 115 ರನ್ಗೆ ಆಲೌಟ್ ಆಯಿತು.ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತು. ಭುವನೇಶ್ವರ್ ಕುಮಾರ್ ಓವರ್ನ ಮೊದಲ ಎಸೆತದಲ್ಲಿ ವೆಸ್ಲೆ ಮಧಿವೆರೆ ವಿಕೆಟ್ ಪತನಗೊಂಡಿತು. ರೆಗಿಸ್ ಚೆಕಬ್ವಾ ಕೂಡ ಡಕೌಟ್ ಆದರು. ಜಿಂಬಾಬ್ವೆ 2 ರನ್ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು.
ನಾಯಕ ಕ್ರೈಕ್ ಎರ್ವಿನ್ ಹಾಗೂ ಸೀನ್ ವಿಲಿಯಮ್ಸನ್ ಜೊತೆಯಾಟ ನೀಡುವ ಸೂಚನೆ ನೀಡಿದರು. ಆದರೆ ಸಾಧ್ಯವಾಗಲಿಲ್ಲ. ಸೀನ್ ವಿಲಿಯಮ್ಸನ್ 11 ರ್ ಸಿಡಿಸಿ ಔಟಾದರೆ, ಕ್ರೈವ್ ಎರ್ವಿನ್ 13 ರನ್ ಸಿಡಿಸಿ ಔಟಾದರು. ರ್ಯಾನ್ ಬರ್ಲ್ 35 ರನ್ ಕಾಣಿಕೆ ನೀಡಿದರು.
ವೆಲ್ಲಿಂಗ್ಟನ್ ಮಸಕಜ್ಡ, ರಿಚರ್ಡ್ ಎನ್ಗರವ ಅಬ್ಬರಿಸಲಿಲ್ಲ. ಸಿಕಂದರ್ ರಾಜಾ 34 ರನ್ ಸಿಡಿಸಿ ಔಟಾದರು. ಇತ್ತ ಟೆಂಡಾಯಿ ಚತಾರ ವಿಕೆಟ್ ಪತನದೊಂದಿದೆ ಜಿಂಬಾಬ್ವೆ 17.2 ಓವರ್ಗಳಲ್ಲಿ 115 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 71 ರನ್ ಗೆಲುವು ದಾಖಲಿಸಿತು.
ಇದೀಗ ನವೆಂಬರ್ 10 ರಂದು ನಡಯೆಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಹೋರಾಟ ನಡಸೆಲಿದೆ. ಇನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ.