ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ವಿವಿಧ ಟೀಮ್ ನ ಆಟಗಾರರರು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.
ಇತ್ತ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಲಾಗಿದೆ .
ಆದ್ರೆ ಪಾಕಿಸ್ತಾನದಲ್ಲಿ ಈ ನೇಮಕ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನ ಸೂಪರ್ ಲೀಗ್.
ಹೌದು, ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಇಸ್ಲಾಮಾಬಾದ್ ಯುನೈಟೆಡ್ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಧಿಡೀರ್ ಆಗಿ ಮುಜರಬಾನಿ ಈ ಒಪ್ಪಂದವನ್ನು ಕಡೆಗಣಿಸಿ ಐಪಿಎಲ್ ನತ್ತ ಮುಖಮಾಡಿದ್ದಾರೆ.
ಇದರಿಂದಾಗಿ ಪಿಎಸ್‌ಎಲ್ ಟೂರ್ನಿ ಬಿಟ್ಟು ಐಪಿಎಲ್ ಸೇರಿರುವುದು ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಪಾಕ್ ವಾದ . ಹೀಗಾಗಿ ಮುಜರಬಾನಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಮುಜರಬಾನಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ಕೆಕೆಆರ್ ತನ್ನತ್ತ ಸೆಳೆದುಕೊಂಡಿದೆ.



