October 17, 2026
Saturday, October 17, 2026
spot_img

ದಾಂಡೇಲಿ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ : 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಕನ್ನಡ ಜಿಲ್ಲೆಯ ಖಾಸಗಿ ರೆಸಾರ್ಟ್‌ವೊಂದರಲ್ಲಿ ಜಿಪ್‌ಲೈನ್‌ ದುರಂತ ಸಂಭವಿಸಿದೆ.

ವಿಜಯಪುರ ಮೂಲದ 24 ವರ್ಷದ ಕುಬೇರ ಸುರಪುರ ಜಿಪ್‌ಲೈನ್‌ ರೈಡ್‌ ಮಾಡುವ ವೇಳೆ ಕೆಳಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಹಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಅದರ ವಿಡಿಯೋ ವೈರಲ್‌ ಆಗಿದೆ.

ದಾಂಡೇಲಿಯ ಸ್ಟರ್ಲಿಂಗ್‌ ರಿವರ್‌ ರೆಸಾರ್ಟ್‌ನಲ್ಲಿ ರೈಡ್‌ ಮಾಡುವ ವೇಳೆ ಇನ್ನೂ ಆರಂಭದಲ್ಲೇ ಜಿಪ್‌ಲೈನ್‌ನ ಸುರಕ್ಷತಾ ಲಾಕ್‌ ಕಟ್‌ ಆಗಿದೆ. ಅಣ್ಣನ ವಿಡಿಯೋ ಮಾಡುತ್ತಿದ್ದ ಸಹೋದರ ಪ್ರಶಾಂತ್‌ ಫೋನ್‌ನಲ್ಲಿ ಅವರು ಬಿದ್ದಿರುವುದು ರೆಕಾರ್ಡ್‌ ಆಗಿದೆ. ಕುಬೇರ ಅವರ ಕೈ, ಕಾಲು ಮೂಳೆಗಳು ಮುರಿದುಹೋಗಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ. ಈಗಾಗಲೇ ಸಾಕಷ್ಟು ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಇನ್ನೂ ಚಿಕಿತ್ಸೆ ಬಾಕಿ ಇದೆ.

ಜಿಪ್‌ಲೈನ್‌ನ ಉಪಕರಣಗಳು ತುಕ್ಕು ಹಿಡಿದಿದ್ದವು. ಅದನ್ನು ಬದಲಾಯಿಸಿಲ್ಲ, ಸರಿ ಮಾಡಿಸಿಲ್ಲ ಯಾವ ಮುನ್ನೆಚ್ಚರಿಕೆ ಕ್ರಮವಿಲ್ಲದೇ ಸಾಹಸ ಮಾಡಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುತ್ತೇವೆ ಎಂದು ಹೇಳಿದ್ದ ರೆಸಾರ್ಟ್‌ ಮಾಲೀಕರು ಇದೀಗ ಯಾವ ಕರೆಗೂ ಉತ್ತರ ನೀಡುತ್ತಿಲ್ಲ ಎಂದು ಕುಟುಂಬ ಹೇಳಿದೆ.

Must Read