ಹೊಸದಿಗಂತ ಡಿಜಿಟಲ್ ಡೆಸ್ಕ್:
T20 ವಿಶ್ವಕಪ್ 2022 ಮೊದಲ ಪಂದ್ಯದಲ್ಲಿ ನಮೀಬಿಯಾ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾವನ್ನು 55 ರನ್ಗಳಿಂದ ಸೋಲಿಸಿದೆ. ಟಿ20 ವಿಶ್ವಕಪ್ ನಲ್ಲಿ ಫೇವರಿಟ್ ತಂಡವಾಗಿರುವ ಶ್ರೀಲಂಕಾಗೆ ಬಿಗ್ ಶಾಕ್ ಕೊಟ್ಟ ನಮೀಬಿಯಾ ಶುಭಾರಂಭ ಮಾಡಿಕೊಂಡಿದೆ.
ನಮಿಬಿಯಾ ತಂಡವು ಶ್ರೀಲಂಕಾಕ್ಕೆ 164 ರನ್ಗಳ ಸವಾಲಿನ ಗುರಿಯನ್ನು ನೀಡಿದ್ದು, ಆದರೆ ಶ್ರೀಲಂಕಾ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 108 ರನ್ಗಳಿಗೆ ಆಲೌಟ್ ಆಯಿತು.
ನಮಿಬಿಯಾ ಪರವಾಗಿ ಜಾನ್ ಫ್ರೆಲಿಂಕ್ 44, ಜೆಜೆ ಸ್ಮಿತ್ 31, ಸ್ಟೇಫನ್ ಬಾರ್ಡ್ 26 ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ದಾಸುನ್ ಶನಕ 29, ಭಾನುಕ ರಾಜಪಕ್ಸ 20, ಧನಂಜಯ ಡಿಸಿಲ್ವಾ 12 ಹೊರತುಪಡಿಸಿ ಉಳಿದವರು ಎರಡು ಅಂಕಿ ತಲುಪಲಿಲ್ಲ.