Thursday, September 25, 2025

ದಿನಭವಿಷ್ಯ: ಮನೆಯಲ್ಲಿ ಪೂರಕ ಪರಿಸ್ಥಿತಿ ಇದೆ, ಹೊಸ ಉದ್ಯಮಕ್ಕೆ ಕೈ ಹಾಕಬೇಡಿ

ಮೇಷ.
ಮನೆಯಲ್ಲಿ ಪೂರಕ ಪರಿಸ್ಥಿತಿ.  ಹೊಸ ಉದ್ಯಮಕ್ಕೆ ಕೈ ಹಾಕುವುದು ತರವಲ್ಲ. ಖರೀದಿ ಹುಮ್ಮಸ್ಸಿಗೆ ಕಡಿವಾಣ ಹಾಕಿ, ಖರ್ಚು ಕಡಿಮೆ ಮಾಡಿ.
ವೃಷಭ
ಕುಟುಂಬಸ್ಥರ ಆರೋಗ್ಯಕ್ಕೆ ಗಮನ ಕೊಡಿ. ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಿ. ಮೋಸ ಹೋಗುವ ಸಾಧ್ಯತೆಯಿದೆ.
ಮಿಥುನ
ಸಂಗಾತಿ ಜತೆಗೆ ಸಂಬಂಧ ಬಲಪಡಿಸಿ. ಆವೇಶದ ಮಾತು ಕಲಹಕ್ಕೆ ಕಾರಣವಾದೀತು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.
ಕಟಕ
ದೂರ ಪ್ರಯಾಣ ಸಂಭವ. ವೃತ್ತಿಯಲ್ಲಿ ನಿಮಗೆ ಪೂರಕ ಬೆಳವಣಿಗೆ. ಅಜೀರ್ಣ ಸಮಸ್ಯೆ ಕಾಡಬಹುದು.      ಪಥ್ಯ ಅನುಸರಿಸಿ.
ಸಿಂಹ
ಕೌಟುಂಬಿಕ ಕಾಳಜಿ ಪ್ರದರ್ಶಿಸುವಿರಿ. ಹಠಮಾರಿ ಮಕ್ಕಳಿಂದ ನೆಮ್ಮದಿ ಹಾಳಾದೀತು. ಆಹಾರದ ವಿಷಯದಲ್ಲಿ ಜಾಗರೂಕರಾಗಿರಿ.
ಕನ್ಯಾ
ಸಂಗಾತಿ ಜತೆಗೆ ಹೊಂದಾಣಿಕೆ ಮುಖ್ಯ. ಮನೆಯ ಶಾಂತಿ ಕೆಡಿಸುವ ಮಾತು ಆಡದಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತಡ ಉಂಟಾಗಲಿದೆ.
ತುಲಾ
ಮನೆಯಲ್ಲಿ ಶಾಂತ ವಾತಾವರಣ. ಆದರೆ ವೃತ್ತಿಯಲ್ಲಿ ಕೆಲವು ಒತ್ತಡ ಎದುರಿಸುವಿರಿ. ಪಿತ್ರಾರ್ಜಿತ ಸಂಪತ್ತು ಸಿಗುವ ಸಾಧ್ಯತೆ.
ವೃಶ್ಚಿಕ
ಮಾನಸಿಕ ಮತ್ತು ಭಾವನಾತ್ಮಕ ಏರುಪೇರು ಸಂಭವ. ನೀವು ಬಯಸಿದ ಬೆಳವಣಿಗೆ ಉಂಟಾಗದ್ದು ಅದಕ್ಕೆ ಕಾರಣ. ಆಪ್ತರು ದೂರವಾದಾರು.
ಧನು
ಸಂಗಾತಿಯನ್ನು ಹೆಚ್ಚು ಅರ್ಥ ಮಾಡಿಕೊಳ್ಳಿ. ಪೊಸೆಸಿವ್ ಧೋರಣೆ ಬಿಕ್ಕಟ್ಟು ಸೃಷ್ಟಿಸಬಹುದು. ತಂದೆ-ಮಗನ ಮಧ್ಯೆ ಉದ್ವಿಗ್ನತೆ ಸೃಷ್ಟಿ ಸಾಧ್ಯತೆ.
ಮಕರ
ನಿಮ್ಮ ವ್ಯವಹಾರ ಸುಲಲಿತವಾಗಿ ಸಾಗುವುದು. ಆರೋಗ್ಯ ಸುಸ್ಥಿರ. ಆದರೆ ಸಣ್ಣ ನೋವನ್ನೂ  ಕಡೆಗಣಿಸ ಬೇಡಿ. ಚಿಕಿತ್ಸೆ ಪಡೆಯಿರಿ.
ಕುಂಭ
ಸಹೋದ್ಯೋಗಿ ಜತೆ ಸಾಮರಸ್ಯ ಕಾಯ್ದುಕೊಳ್ಳಿ.ಇಲ್ಲದ ವಿವಾದ ಮೈಮೇಲೆ ಎಳೆದುಕೊಳ್ಳಬೇಡಿ. ಮಹಿಳೆಯರು ಸ್ವಾಸ್ಥ್ಯಕ್ಕೆ ಆದ್ಯತೆ ಕೊಡಿ.
ಮೀನ
ಸಂಗಾತಿ ಜತೆಗೆ ಸಂಬಂಧ ಸುಧಾರಿಸಲು ಗಮನ ಕೊಡಿ. ವಾಗ್ವಾದದ ಕಾರಣಕ್ಕೆ ದ್ವೇಷ ಕಟ್ಟಿಕೊಳ್ಳಬೇಡಿ. ಹೊಂದಾಣಿಕೆ ಮುಖ್ಯ.

ಇದನ್ನೂ ಓದಿ